ಲಂಡನ್: ಅಮೆರಿಕ ಓಪನ್ ರನ್ನರ್ ಅಪ್ ಟೇಲರ್ ಪ್ರಿಟ್ಸ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ವಿಶ್ವದ ಅಗ್ರ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಆರಂಭಿಕ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡು ಐದು ವರ್ಷಗಳಲ್ಲಿ ಮೂರನೇ ಸಲ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ 27 ವರ್ಷ ವಯಸ್ಸಿನ ಪ್ರಿಡ್ಜ್ 6-3, 6-4, 1-6, 7-6 (4)ರಿಂದ 17ನೇ ಶ್ರೇಯಾಂಕದ ಕರೆನ್ ಕಚನೋವ್ (ರಷ್ಯಾ) ಅವರನ್ನು ಸೋಲಿಸಿ ಎರಡನೇ ಬಾರಿ ಟ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್ ತಲುಪಿದರು. ಅವರಿಗೆ ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ (ಸ್ಪೇನ್) ಎದುರಾಳಿಯಾಗಿದ್ದಾರೆ.
ಮೊದಲೆರಡು ಸುತ್ತಿನ ಪಂದ್ಯದಲ್ಲಿ ಐದು ಸೆಟ್‌ಗಳ ಹೋರಾಟ ನಡೆಸಿ ಸೋಲಿನ ದವಡೆಯಿಂದ ಪಾರಾಗಿದ್ದ ಫ್ರಿಡ್ಜ್ ಈ ಪಂದ್ಯದಲ್ಲೂ ಪೈಪೋಟಿ ಎದುರಿಸಿದರು. ಎರಡು ಸೆಟ್ ಗೆದ್ದ ಬಳಿಕ ಪಾದದ ನೋವಿಗೆ ತುತ್ತಾದ ಅವರು ಪಂದ್ಯದ ಮಧ್ಯದಲ್ಲಿ ವೈದ್ಯಕೀಯ ನೆರವು ಪಡೆದು, ಆಟ ಮುಂದುವರಿಸಿದರು. ಮೂರನೇ ಸೆಟ್‌ನಲ್ಲಿ ಹಿನ್ನಡೆ ಕಂಡ ಅವರು ನಾಲ್ಕನೇ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಪಡೆದರು.
ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಛಲದಲ್ಲಿರುವ ಅಲ್ಕರಾಜ್, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-2, 6-3, 6-3ರಿಂದ ಬ್ರಿಟನ್‌ನ ಶ್ರೇಯಾಂಕರಹಿತ ಕ್ಯಾಮರೂನ್ ನೋರಿ ಅವರನ್ನು ಮಣಿಸಿದರು.ಬೆಲರೂಸ್‌ನ ಆಟಗಾರ್ತಿ ಸಬಲೆಂಕಾ 4-6, 6-2, 6-4 00 ಅವರನ್ನು ಸೋಲಿಸಲು 2 ಗಂಟೆ 54 ನಿಮಿಷ ಹೋರಾಟ ನಡೆಸಬೇಕಾಯಿತು. 27 ವರ್ಷ ವಯಸ್ಸಿನ ಸಬಲೆಂಕಾ 2021 ಮತ್ತು 2023ರ ಬಳಿಕ ಮತ್ತೆ ನಾಲ್ಕರ ಘಟ್ಟ ಪ್ರವೇಶಿಸಿದರು.