image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

14ನೆಯ ಬಾರಿ ವಿಂಬಲ್ಡನ್ ಸೆಮಿಫೈನಲ್ ಗೆ ತಲುಪಿದ ನೊವಾಕ್ ಜೋಕೊವಿಕ್

14ನೆಯ ಬಾರಿ ವಿಂಬಲ್ಡನ್ ಸೆಮಿಫೈನಲ್ ಗೆ ತಲುಪಿದ ನೊವಾಕ್ ಜೋಕೊವಿಕ್

ಲಂಡನ್: ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ 14ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ಆರನೇ ಶ್ರೇಯಾಂಕದ ಜೊಕೊವಿಚ್ ಆರಂಭಿಕ ಸೆಟ್‌ನ ಹಿನ್ನಡೆಯಿಂದ ಚೇತರಿಸಿಕೊಂಡು ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ಅವರನ್ನು ಸೋಲಿಸಿದರು. ದಾಖಲೆಯ 25ನೇ ಟ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ನಿರೀಕ್ಷೆಯಲ್ಲಿರುವ 38 ವರ್ಷ ವಯಸ್ಸಿನ ಜೊಕೊವಿಚ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ 6-7 (6/8), 6-2, 7-5, 6-4ರಿಂದ 22ನೇ ಶ್ರೇಯಾಂಕದ ಕೊಬೊಲ್ಲಿ ವಿರುದ್ಧ ಗೆಲುವು ಸಾಧಿಸಿದರು. ಏಳು ಬಾರಿಯ ಚಾಂಪಿಯನ್‌ಗೆ ಮುಂದಿನ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ, ಇಟಲಿಯ ಯಾನಿಕ್ ಸಿನ್ನರ್ ಎದುರಾಳಿಯಾಗಿದ್ದಾರೆ.

ಇದೇ ಮೊದಲ ಬಾರಿ ಟ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ 23 ವರ್ಷ ವಯಸ್ಸಿನ ಇಟಲಿಯ ಕೊಬೊಲ್ಲಿ ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಗೆದ್ದು ಜೊಕೊವಿಚ್ ಅನ್ನು ಆತಂಕಕ್ಕೆ ತಳ್ಳಿದ್ದರು. ನಂತರದಲ್ಲಿ ಪುಟಿದೆದ್ದ ಸರ್ಬಿಯಾ ಆಟಗಾರ ಸತತ ಮೂರು ಸೆಟ್‌ಗಳನ್ನು ಗೆದ್ದು ಪಾರಮ್ಯ ಮೆರೆದರು. 14ನೇ ಬಾರಿ ನಾಲ್ಕರ ಘಟ್ಟ ಪ್ರವೇಶಿಸುವ ಮೂಲಕ ಜೊಕೊವಿಚ್ ಅವರು ಎಂಟು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಅವರ ದಾಖಲೆಯನ್ನು ಮುರಿದರು. 

Category
ಕರಾವಳಿ ತರಂಗಿಣಿ