image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ಚೆಸ್ ವಿಶ್ವಕಪ್ ಗೆದ್ದ ದಿವ್ಯಾ ದೇಶ್‌ಮುಖ್...

ಮಹಿಳಾ ಚೆಸ್ ವಿಶ್ವಕಪ್ ಗೆದ್ದ ದಿವ್ಯಾ ದೇಶ್‌ಮುಖ್...

ಜಾರ್ಜಿಯಾ : ಫಿಡೆ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೈ ಬ್ರೇಕರ್ ಮೂಲಕ ಜಯ ಸಾಧಿಸಿದ ದಿವ್ಯಾ ದೇಶ್‌ಮುಖ್ (Divya Deshmukh) ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಭಾರತದವರೇ ಅದ ಕೊನೆರು ಹಂಪಿ ಅವರನ್ನು ಫೈನಲ್‌ನಲ್ಲಿ ಸೋಲಿಸಿದ ದಿವ್ಯಾ ಮಹಿಳಾ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಆರಂಭದಿಂದಲೇ ಸಮಬಲದ ಪಂದ್ಯವಾಗಿದ್ದ ಈ ಕ್ಲಾಸಿಕಲ್ ಸುತ್ತು ಭಾನುವಾರ ಸಮಬಲದಲ್ಲಿ ಕೊನೆಗೊಂಡು ಫೈನಲ್ ಪಂದ್ಯವನ್ನು ಟೈ-ಬ್ರೇಕರ್‌ಗೆ ತಳ್ಳಿತ್ತು. ಸೋಮವಾರ ದಿವ್ಯಾ ಟೈ-ಬ್ರೇಕರ್‌ನಲ್ಲಿ 1.5-0.5 ಅಂಕಗಳಿಂದ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದರು. ಈ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆಯಲು ಯಶಸ್ವಿಯಾದರು.

ಕೊನೆರು ಹಂಪಿ, ಆ‌ರ್. ವೈಶಾಲಿ ಮತ್ತು ಹರಿಕಾ ದ್ರೋಣವಲ್ಲಿ ಅವರ ಹೆಜ್ಜೆಗಳನ್ನು ಅನುಸರಿಸಿದ ದಿವ್ಯಾ ನಾಲ್ಕನೇ ಮಹಿಳಾ ಭಾರತೀಯ ಗ್ರಾಂಡ್ ಮಾಸ್ಟರ್ ಆದರು. 19 ವರ್ಷದ ದಿವ್ಯಾ ದೇಶ್‌ಮುಖ್ ಸೆಮಿಫೈನಲ್‌ನಲಿ ಮಾಜಿ ವಿಶ್ವಚಾಂಪಿಯನ್, ಚೀನಾದ ಝೂಂಗಿ ತಾನ್ ವಿರುದ್ಧ ಗೆದ್ದರೆ, ಮತ್ತೊಂದರಲ್ಲಿ 30 ವರ್ಷದ ಕೊನೆರು ಹಂಪಿ, ಚೀನಾದ ಟಿಂಗ್ಲಿ ಲೀ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದರು. ಈ ಕೂಟದಲ್ಲಿ ದಿವ್ಯಾ ಮೊದಲಿಗೆ ಫೈನಲ್‌ಗೆ ಪ್ರವೇಶಿಸಿದ್ದರಿಂದ, ಕೂಟದ ಇತಿಹಾಸದಲ್ಲಿ ಭಾರತ ಪರ ಫೈನಲ್‌ಗೇರಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. ಈ ಟೂರ್ನಿಯ ಪ್ರದರ್ಶನದೊಂದಿಗೆ ಇಬ್ಬರೂ ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಚೆಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

2012 ರಲ್ಲಿ ದಿವ್ಯಾ ದೇಶ್‌ಮುಖ್ 7 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡರು. ಅದರ ನಂತರ U-10 (ಡರ್ಬನ್, 2014) ಮತ್ತು U-12 (ಬ್ರೆಜಿಲ್, 2017) ವಿಭಾಗಗಳಲ್ಲಿ ವಿಶ್ವ ಯುವ ಪ್ರಶಸ್ತಿಗಳನ್ನು ಪಡೆದರು.

Category
ಕರಾವಳಿ ತರಂಗಿಣಿ