image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

19 ವರ್ಷದೊಳಗಿನವರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ ಸುಮನ ಕುಮಾರಿ

19 ವರ್ಷದೊಳಗಿನವರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ ಸುಮನ ಕುಮಾರಿ

ಬ್ಯಾಂಕಾಕ್: ಭಾರತದ ಸುಮನ್ ಕುಮಾರಿ ಅವರು ಶುಕ್ರವಾರ  ಆರಂಭವಾದ 19 ವರ್ಷದೊಳಗಿನವರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭಮಾಡಿದರು. ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮನ್, ಚೀನಾ ತೈಪೆಯ ಮೆಂಗ್-ಸಿನ್ ಶೆಂಗ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ ಭಾರತದ ಇತರ ಸ್ಪರ್ಧಿಗಳು ನಿರಾಶೆ ಅನುಭವಿಸಿದರು. ಪುರುಷರ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಕಾಶ್ ಬದ್ವಾಡ್, 70 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾರಥಿ ಸೈನಿ ಹಾಗೂ 80 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲೋಕೇಶ್ ಸೋಲನುಭವಿಸಿದರು.

Category
ಕರಾವಳಿ ತರಂಗಿಣಿ