image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕನ್ ಓಪನ್ ಟೆನಿಸ್ 2025: ಫೈನಲ್ ಸೆಣಸಿಗೆ ಅಲ್ಕರಾಜ್‌-ಸಿನ್ನರ್

ಅಮೆರಿಕನ್ ಓಪನ್ ಟೆನಿಸ್ 2025: ಫೈನಲ್ ಸೆಣಸಿಗೆ ಅಲ್ಕರಾಜ್‌-ಸಿನ್ನರ್

ಅಮೇರಿಕ : ಅನುಭವಿ ನೊವಾಕ್ ಜೊಕೊವಿಚ್‌ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ಕಾರ್ಲೋಸ್‌ ಅಲ್ಕರಾಜ್ ಅವರು ಅಮೆರಿಕ ಓಪನ್‌ ಫೈನಲ್‌ ತಲುಪಿದರು. ಫೈನಲ್‌ನಲ್ಲಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದು, ಮತ್ತೊಂದು 'ಬ್ಲಾಕ್‌ಬಸ್ಟರ್‌' ಸೆಣಸಾಟಕ್ಕೆ ವೇದಿಕೆ ರೂಪಿಸಿಕೊಂಡರು. ಎರಡನೇ ಶ್ರೇಯಾಂಕದ ಅಲ್ಕರಾಜ್ ಶುಕ್ರವಾರ 2 ಗಂಟೆ 23 ನಿಮಿಷಗಳವರೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಿರುಸಿನ ಆಟವಾಡಿ 6-4, 7-6 (7-4), 6-2 ರಿಂದ ಜೊಕೊವಿಚ್‌ ಅವರನ್ನು ಸೋಲಿಸಿದರು. ಇಲ್ಲಿ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಜೊಕೊವಿಚ್‌ ಕನಸು ಕಮರಿಹೋಯಿತು. ಅಲ್ಕರಾಜ್ ಇದೀಗ ತಮ್ಮ ಬದ್ಧ ಎದುರಾಳಿ, ಇಟಲಿಯ ಯಾನಿಕ್ ಸಿನ್ನರ್ ಅವರನ್ನು ಎದುರಿಸಬೇಕಾಗಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಸಿನ್ನರ್, 25ನೇ ಶ್ರೇಯಾಂಕದ ಕೆನಡಾದ ಆಟಗಾರ ಫೆಲಿಕ್ಸ್‌ ಓಜೆ ಆಲಿಯಾಸೀಮ್ ಅವರನ್ನು ಸೋಲಿಸಲು ಶ್ರಮ ಹಾಕಬೇಕಾಯಿತು. ಹಾಲಿ ಚಾಂಪಿಯನ್ ಈ ಪಂದ್ಯವನ್ನು 6-1, 3-6, 6-3, 6-4 ರಿಂದ ಗೆದ್ದರು.

ಈ ವರ್ಷ ಸತತ ಮೂರನೇ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ನಲ್ಲಿ ಅಲ್ಕರಾಜ್ ಮತ್ತು ಸಿನ್ನರ್ ಮುಖಾಮುಖಿಯಾಗುತ್ತಿದ್ದಾರೆ. ಈ ಪೈಪೋಟಿಗೆ ಸಾಕ್ಷಿ ಆಗಲಿರುವ 23000 ಪ್ರೇಕ್ಷಕರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಒಬ್ಬರಾಗಿರಲಿದ್ದಾರೆ. ಜೂನ್‌ನಲ್ಲಿ ಸುಮಾರು ಐದೂವರೆ ಗಂಟೆಗಳ ಅವಿಸ್ಮರಣೀಯ ಫ್ರೆಂಚ್‌ ಓಪನ್ ಫೈನಲ್‌ನಲ್ಲಿ ಅಲ್ಕರಾಜ್ ಜಯಗಳಿಸಿದ್ದರು. ಆದರೆ ತಿಂಗಳ ನಂತರ ವಿಂಬಲ್ಡನ್‌ ಫೈನಲ್‌ನಲ್ಲಿ ಗೆದ್ದ ಸಿನ್ನರ್ ಅವರು ಅಲ್ಕರಾಜ್‌ ಅವರನ್ನು ಚಾಂಪಿಯನ್ ಪಟ್ಟದಿಂದ ಕೆಳಗಿಳಿಸಿದ್ದರು. ಜೊಕೊವಿಚ್‌ ವಿರುದ್ಧ ಆಡಿದ ರೀತಿ ನೋಡಿದರೆ, ಅಲ್ಕರಾಜ್ ಅವರು ಸಿನ್ನರ್ ಅವರನ್ನು ಸೋಲಿಸಲು ಸಮರ್ಥರಾಗಿರು ವಂತೆ ಕಾಣುತ್ತಿದೆ. ಏನಿದ್ದರೂ ಫೈನಲ್ ಪಂದ್ಯ ಗೆಲ್ಲುವ ಆಟಗಾರ ಸೋಮವಾರ ಪ್ರಕಟವಾಗುವ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

Category
ಕರಾವಳಿ ತರಂಗಿಣಿ