image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ಪ್ಯಾರಾ ಅತ್ಲೆಟಿಕ್ಸ್‌ನಲ್ಲಿ ಬಂಗಾರ ಬಾಚಿದ ಶೈಲೇಶ್‌

ವಿಶ್ವ ಪ್ಯಾರಾ ಅತ್ಲೆಟಿಕ್ಸ್‌ನಲ್ಲಿ ಬಂಗಾರ ಬಾಚಿದ ಶೈಲೇಶ್‌

ಹೊಸದಿಲ್ಲಿ: ವಿಶ್ವ ಪ್ಯಾರಾ ಆಯತ್ಲೆಟಿಕ್ಸ್‌ನ ಪುರುಷರ ಹೈಜಂಪ್‌ನಲ್ಲಿ ಭಾರತದ ಶೈಲೇಶ್‌ ಕುಮಾರ್‌ ಚಿನ್ನ ಗೆದ್ದಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ವರುಣ್‌ ಸಿಂಗ್‌ ಭಾಟಿಗೆ ಕಂಚು ಲಭಿಸಿದೆ. ಮಹಿಳಾ 400 ಮೀ. ಓಟದಲ್ಲಿ ದೀಪ್ತಿ ಜೀವಂಜಿ ಬೆಳ್ಳಿ ಜಯಿಸಿದ್ದಾರೆ. ಪುರುಷರ ಟಿ42 ವಿಭಾಗದಲ್ಲಿ ಸ್ಪರ್ಧಿಸಿದ್ದ ಶೈಲೇಶ್‌ ಕುಮಾರ್‌, 1.91 ಮೀ. ಜಿಗಿತದ ಸಾಧನೆಯೊಂದಿಗೆ ಚಿನ್ನ ಗೆದ್ದರು. ಜತೆಗೆ ಕೂಟ ಮತ್ತು ಏಷ್ಯನ್‌ ದಾಖಲೆಯನ್ನೂ ನಿರ್ಮಿಸಿದರು. ಮಹಿಳಾ 400 ಮೀ. ಓಟ ಟಿ20 ವಿಭಾಗದಲ್ಲಿ ತೆಲಂಗಾಣದ ಓಟಗಾರ್ತಿ ದೀಪ್ತಿ 55.16 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನಿಯಾದರು. ಈ ವಿಭಾಗದಲ್ಲಿ ಟರ್ಕಿಯ ಐಸೆಲ್‌ ಒಂಡರ್‌, 54.51 ಸೆಕೆಂಡ್‌ ಕಾಲಾವಧಿಯೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ತಿದ್ದಿ ಚಿನ್ನ ಗೆದ್ದರು.

Category
ಕರಾವಳಿ ತರಂಗಿಣಿ