image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೂನಿಯರ್‌ ವಿಶ್ವಕಪ್ ಶೂಟಿಂಗ್‌ : ಪ್ರಾಬಲ್ಯ ಮೆರೆದ ಭಾರತ

ಜೂನಿಯರ್‌ ವಿಶ್ವಕಪ್ ಶೂಟಿಂಗ್‌ : ಪ್ರಾಬಲ್ಯ ಮೆರೆದ ಭಾರತ

ನವದೆಹಲಿ: ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನ ಮೂರನೇ ದಿನವಾದ ಶನಿವಾರವೂ ಪ್ರಾಬಲ್ಯ ಮುಂದುವರಿಸಿದರು. ರಶ್ಮಿಕಾ ಸೆಹಗಲ್‌- ಕಪಿಲ್‌ ಜೋಡಿಯು 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣಕ್ಕೆ ಗುರಿ ಇಟ್ಟರೆ, ವಂಶಿಕಾ ಚೌಧರಿ ಹಾಗೂ ಆಯಂಟನಿ ಜೊನಾಥನ್‌ ಗ್ಯಾವಿನ್‌ ಅವರು ಬೆಳ್ಳಿ ಪದಕ ಜಯಿಸಿದರು. ರೈಝಾ ಧಿಲ್ಲಾನ್‌ ಅವರು ಸ್ಕೀಟ್‌ನಲ್ಲಿ ರಜತ ಪದಕ ಗೆದ್ದುಕೊಂಡರು. ಜೂನಿಯರ್‌ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಶ್ಮಿಕಾ ಅವರು ಕಪಿಲ್‌ ಜೊತೆಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿದರು. ಚಿನ್ನದ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಈ ಜೋಡಿಯು 16-10ರಿಂದ ಸ್ವದೇಶದ ವಂಶಿಕಾ-ಆಯಂಟನಿ ಜೋಡಿಯನ್ನು ಮಣಿಸಿತು.

ಒಲಿಂಪಿಯನ್‌ ರೈಝಾ (51 ಪಾಯಿಂಟ್ಸ್‌) ಅವರು ಜೂನಿಯರ್‌ ಮಹಿಳೆಯರ ಸ್ಕೀಟ್‌ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಮಾನಸಿ ರಘುವಂಶಿ (41) ಕಂಚಿನ ಪದಕ ಗೆದ್ದರೆ, ಇಟಲಿಯ ಅರಿಯಾನ ನೆಂಬರ್ (53) ಸ್ವರ್ಣಕ್ಕೆ ಮುತ್ತಿಕ್ಕಿದರು. ಟೂರ್ನಿಯಲ್ಲಿ 11 ಪದಕಗಳನ್ನು (ಮೂರು ಚಿನ್ನ, ಐದು ಬೆಳ್ಳಿ ಹಾಗೂ 3 ಕಂಚಿನ ಪದಕ) ಗೆದ್ದಿರುವ ಭಾರತವು ಪದಕ‍ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದಿರುವ ಇಟಲಿ ಎರಡನೇ ಸ್ಥಾನದಲ್ಲಿದೆ.

Category
ಕರಾವಳಿ ತರಂಗಿಣಿ