image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಭಾರತದಲ್ಲಿ ಫುಟ್‌ಬಾಲ್‌ಗೆ ಉಜ್ವಲ ಭವಿಷ್ಯವಿದೆ' ಎಂದು ನಾನು ಭಾವಿಸುತ್ತೇನೆ : ಲಿಯೋನಲ್ ಮೆಸ್ಸಿ

'ಭಾರತದಲ್ಲಿ ಫುಟ್‌ಬಾಲ್‌ಗೆ ಉಜ್ವಲ ಭವಿಷ್ಯವಿದೆ' ಎಂದು ನಾನು ಭಾವಿಸುತ್ತೇನೆ : ಲಿಯೋನಲ್ ಮೆಸ್ಸಿ

ಮುಂಬೈ : ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ, ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‌ಮೆಸ್ಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಕ್ಲಿಪ್ ಒಂದನ್ನು ಹಂಚಿಕೊಂಡು ಅಡಿ ಬರಹದಲ್ಲಿ 'ಭಾರತದಲ್ಲಿ ಫುಟ್‌ಬಾಲ್‌ಗೆ ಉಜ್ವಲ ಭವಿಷ್ಯವಿದೆ' ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 'ಗೋಟ್' (greatest of all time) ಪ್ರವಾಸದ ಭಾಗವಾಗಿ ಮೆಸ್ಸಿ ಕೋಲ್ಕತ್ತದ ಸಾಳ್ವೆಲೇಕ್ ಕ್ರೀಡಾಂಗಣಕ್ಕೆ ಮೊದಲು ಭೇಟಿ ನೀಡಿದ್ದರು. ಆ ಬಳಿಕ ಹೈದರಾಬಾದ್, ಮುಂಬೈ, ದೆಹಲಿಗೆ ಭೇಟಿ ನೀಡಿದ್ದರು. ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಅವರು ಮಂಗಳವಾರ ವನತಾರ ವನ್ಯಜೀವಿ ಆರೈಕೆ ಮತ್ತು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ್ದರು.

Category
ಕರಾವಳಿ ತರಂಗಿಣಿ