image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೌರಿಬಿದನೂರು ನಗರಕ್ಕೆ ಚಡ್ಡಿಗ್ಯಾಂಗ್​​​ ಎಂಟ್ರಿ

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಕ್ಕೆ ಚಡ್ಡಿಗ್ಯಾಂಗ್​​​ ಎಂಟ್ರಿಯಾಗಿದೆ. ನಿನ್ನೆ ರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್​ನ ಚಲನವಲನದ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದ ಬಳಿ ಜುಲೈ 5ರ ಮುಂಜಾನೆ 2:25ರ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ದರೋಡೆಕೋರರ ಗ್ಯಾಂಗ್ ಆಗಿದ್ದು, ತಂಡದಲ್ಲಿ ನಾಲ್ವರು ಇದ್ದಾರೆ. ಚಡ್ಡಿ ಧರಿಸಿದ್ದು, ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದಾರೆ. ಸೊಂಟಕ್ಕೆ ಮಾರಾಕಾಸ್ತ್ರವನ್ನು ಕಟ್ಟಿಕೊಂಡಿರುವ ಅವರು ದರೋಡೆಗೆ ಯತ್ನಿಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೌರಿಬಿದನೂರು ನಗರ ಪೊಲೀಸ್​​ ಠಾಣೆಯ ಸಿಬ್ಬಂದಿ ಜುಲೈ 5ರ ಮಧ್ಯರಾತ್ರಿ ಗಸ್ತಿನಲ್ಲಿದ್ದಾಗ, ಅಪರಿಚಿತ ವ್ಯಕ್ತಿಗಳು ಓಡಾಡುತ್ತಿರುವ ಸುಳಿವು ಸಿಕ್ಕಿದೆ. ಸ್ಥಳಕ್ಕೆ ತಲುಪುವಷ್ಟರಲ್ಲಿ ಚಡ್ಡಿಗ್ಯಾಂಗ್ ಅಲ್ಲಿಂದ ಪರಾರಿಯಾಗಿದೆ. ಸ್ಥಳದಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ದರೋಡೆಗೆ ಸಂಚು ನಡೆಸಿರುವುದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಗಳ ಬೀಗ ಒಡೆದು ಒಳ ನುಗ್ಗುವ ಚಡ್ಡಿಗ್ಯಾಂಗ್​​, ಚಿನ್ನಾಭರಣ ಲೂಟಿ ಮಾಡುತ್ತಾರೆ. ಈ ವೇಳೆ ಮಾರಾಕಾಸ್ತ್ರಗಳಿಂದ ಹಲ್ಲೆ ಸಹ ಮಾಡುತ್ತಾರೆ. ಹೀಗಾಗಿ, ಗೌರಿಬಿದನೂರು ಪೊಲೀಸರು ನಗರ ಜನತೆಯಲ್ಲಿ ಮನವಿ ಮಾಡಿದ್ದು, ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ, ಯಾವುದೇ ರೀತಿಯ ಸುಳಿವು ಸಿಕ್ಕಲ್ಲಿ ತಮಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಕ್ಕೆ ಚಡ್ಡಿಗ್ಯಾಂಗ್​​​ ಎಂಟ್ರಿಯಾಗಿದೆ. ನಿನ್ನೆ ರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್​ನ ಚಲನವಲನದ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದ ಬಳಿ ಜುಲೈ 5ರ ಮುಂಜಾನೆ 2:25ರ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ದರೋಡೆಕೋರರ ಗ್ಯಾಂಗ್ ಆಗಿದ್ದು, ತಂಡದಲ್ಲಿ ನಾಲ್ವರು ಇದ್ದಾರೆ. ಚಡ್ಡಿ ಧರಿಸಿದ್ದು, ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದಾರೆ. ಸೊಂಟಕ್ಕೆ ಮಾರಾಕಾಸ್ತ್ರವನ್ನು ಕಟ್ಟಿಕೊಂಡಿರುವ ಅವರು ದರೋಡೆಗೆ ಯತ್ನಿಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

Category
ಕರಾವಳಿ ತರಂಗಿಣಿ