ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಜ್ಯೋತಿ ಜಂಕ್ಷನ್ ವಾಟರ್ ಟ್ಯಾಂಕ್ ಬಳಿ ಆಟೋ ರಿಕ್ಷಾದಲ್ಲಿ ಗುರುವಾರ ಗಾಂಜಾ ಮಾರಾಟ ಮಾಡುತ್ತಿದ್ದ ವಾಮಂಜೂರು ನಿವಾಸಿ ಬದ್ರುದ್ದೀನ್ (35) ಎಂಬವನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನಿಂದ ಸುಮಾರು ಒಟ್ಟು 2 ಕೆಜಿ ತೂಕದ ಗಾಂಜಾ ಮತ್ತು 20 ಸಾವಿರ ನಗದು, 1 ಮೊಬೈಲ್ ಫೋನ್, 1 ಆಟೋ ರಿಕ್ಷಾ ಸೊತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿ, ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಇವರ ನಿರ್ದೇಶನದಂತೆ, ಡಿಸಿಪಿ ಮಿಥುನ್.ಹೆಚ್.ಎನ್, ರವಿಶಂಕರ್ ಪೊಲೀಸ್ ಉಪ-ಆಯುಕ್ತರ (ಅಪರಾಧ & ಸಂಚಾರ) ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ವಿಜಯಕ್ರಾಂತಿರವರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗವಿರಾಜು. ಆರ್.ಪಿ, ಅರುಣ್ ಕುಮಾರ್ ಡಿ, ಪಿ.ಎಸ್.ಐ (ಕಾ&ಸು), ಹಾಗೂ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ ಕಮಲಾಕ್ಷ, ಶಶಿಧರ್, ಶಂಕ್ರಪ್ಪ ಮತ್ತು ಸಿ.ಪಿ.ಸಿ ಸಿಕಂದರ್, ಬೀರೇಂದ್ರ, ಪ್ರದೀಪ್‍ರವರು ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಶ್ರಮಿಸಿರುತ್ತಾರೆ.