image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬುರುಡೆ ದೂರು ಪ್ರಕರಣ : ಬೋಳಿಯಾರಿನಲ್ಲೂ ಪತ್ತೆಯಾಗದ ಕಳೇಬರ

ಬುರುಡೆ ದೂರು ಪ್ರಕರಣ : ಬೋಳಿಯಾರಿನಲ್ಲೂ ಪತ್ತೆಯಾಗದ ಕಳೇಬರ

ಬೆಳ್ತಂಗಡಿ: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿ ಬುರುಡೆ ದೂರುದಾರನ ಮಾಹಿತಿಯಂತೆ ಬೊಳಿಯಾರು ಸಮೀಪದ ಅರಣ್ಯದಲ್ಲಿ ನಡೆಸುತ್ತಿದ್ದ ಇಂದಿನ ಕಾರ್ಯಾಚರಣೆಯನ್ನು ಎಸ್ ಐಟಿ ತಂಡ ಸ್ಥಗಿತಗೊಳಿಸಿದ್ದು, ಕಾರ್ಯಾಚರಣೆಯಲ್ಲಿ ಯಾವುದೇ ಕಳೇಬರಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ ಎಸ್ ಐಟಿ ಅಧಿಕಾರಿಗಳು ಬೊಳಿಯಾರು ಅರಣ್ಯಕ್ಕೆ ಅಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಹಿಟಾಚಿಯನ್ನು ಬಳಸಿಕೊಂಡು ಕಾರ್ಮಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತಾದರೂ,  ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

Category
ಕರಾವಳಿ ತರಂಗಿಣಿ