ಮಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಹೊತ್ತು ಕ್ಲೀನ್‌ಚಿಟ್ ಪಡೆದ ಮೂವರಿಗೆ ವಿಶೇಷ ತನಿಖಾ ತಂಡ ಬುಲಾವ್ ನೀಡಿರುವ ಬಗ್ಗೆ ವರದಿಯಾಗಿದ್ದು, ಸೌಜನ್ಯ ಫ್ರಕರಣವು ಕೂಡ ಎಸ್ ಐ ಟಿ ವ್ಯಾಪ್ತಿಗೆ ಬಂದಿದೆಯೇ ಎನ್ನುವ ಸಣ್ಣ ಕುತೂಹಲ ಮೂಡಿಸಿದೆ.
ಕರ್ನಾಟಕ ಪೊಲೀಸ್, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ ಎಂದು ತಿಳಿದಿದೆ.