image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪ್ರಧಾನಿ ಮೋದಿ ಭೇಟಿಗಾಗಿ ಕಾಯುತ್ತಿದ್ದಾರೆ ಟ್ರಂಪ್!... ಭಾರತದ ಮುಂದೆ ತಲೆಬಾಗಿದ ಅಮೇರಿಕ

ಪ್ರಧಾನಿ ಮೋದಿ ಭೇಟಿಗಾಗಿ ಕಾಯುತ್ತಿದ್ದಾರೆ ಟ್ರಂಪ್!... ಭಾರತದ ಮುಂದೆ ತಲೆಬಾಗಿದ ಅಮೇರಿಕ

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ವಿಧಿಸಿದ ಭಾರೀ ಸುಂಕಗಳ ನಂತರ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಭಾರತದೊಂದಿಗಿನ ಅಮೆರಿಕ ಸಂಬಂಧ ಬಲಿಷ್ಠವೆಂದು ಬಣ್ಣಿಸಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಸೆಪ್ಟೆಂಬರ್ 17, 2025 ರಂದು ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಒಂದು ದಿನದ ನಂತರ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಟ್ರಂಪ್, ನಾನು ಭಾರತಕ್ಕೆ ಮತ್ತು ಪ್ರಧಾನಿ ಮೋದಿಯವರಿಗೆ ತುಂಬಾ ಹತ್ತಿರವಾಗಿದ್ದೇನೆ. ಇತ್ತೀಚೆಗೆ ಅವರೊಂದಿಗೆ ಮಾತನಾಡಿ, ಶುಭಾಶಯ ಕೋರಿದೆ. ನಮ್ಮ ಸಂಬಂಧ ಉತ್ತಮವಾಗಿದೆ ಎಂದು ಹೇಳಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಯುರೋಪಿಯನ್ ರಾಷ್ಟ್ರಗಳನ್ನು ಟೀಕಿಸಿದ ಟ್ರಂಪ್, ಇಂತಹ ಕ್ರಮಗಳು ರಷ್ಯಾವನ್ನು ಪ್ರತ್ಯೇಕಿಸುವ ಜಾಗತಿಕ ಪ್ರಯತ್ನಗಳಿಗೆ ಹಾನಿಯುಂಟುಮಾಡುತ್ತವೆ ಎಂದು ಆಕ್ಷೇಪಿಸಿದ್ದಾರೆ. ಭಾರತದ ರಷ್ಯಾದ ತೈಲ ವ್ಯಾಪಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ, ಟ್ರಂಪ್ ಮೋದಿಯವರೊಂದಿಗಿನ ತಮ್ಮ ನಿಕಟ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಯುರೋಪ್ ರಷ್ಯಾದಿಂದ ತೈಲ ಖರೀದಿಸುತ್ತಿದೆ, ಆದರೆ ನಾನು ಅವರ ಮೇಲೆ ನಿರ್ಬಂಧ ವಿಧಿಸಿದ್ದೇನೆ. ತೈಲ ಬೆಲೆ ಕಡಿಮೆಯಾದರೆ, ರಷ್ಯಾ ಯುದ್ಧದಲ್ಲಿ ರಾಜಿಯಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗಿನ ಭೇಟಿಯ ಸಂದರ್ಭದಲ್ಲಿ, ಟ್ರಂಪ್ ಮುಂಬರುವ ವಾರಗಳಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಎದುರು ನೋಡುತ್ತಿರುವುದಾಗಿ, ಭಾರತ ಮತ್ತು ಅಮೆರಿಕ ನಡುವೆ ಯಶಸ್ವಿ ವ್ಯಾಪಾರ ಒಪ್ಪಂದಕ್ಕೆ ಬರಲು ತಾವು ವಿಶ್ವಾಸ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ, ಎರಡೂ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳ ಭವಿಷ್ಯ ಇನ್ನೂ ಅನಿಶ್ಚಿತವಾಗಿಯೇ ಉಳಿದಿದೆ. ಟ್ರಂಪ್‌ರವರ ಈ ಹೇಳಿಕೆಯು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ಉದ್ದೇಶವನ್ನು ಸೂಚಿಸುತ್ತದೆ. ಆದರೆ, ಸುಂಕಗಳು ಮತ್ತು ರಷ್ಯಾದ ತೈಲ ವ್ಯಾಪಾರದಂತಹ ವಿಷಯಗಳು ಎರಡೂ ದೇಶಗಳ ನಡುವಿನ ಮಾತುಕತೆಗಳಲ್ಲಿ ಪ್ರಮುಖ ಸವಾಲಾಗಿ ಉಳಿಯಲಿವೆ. ಮುಂದಿನ ದಿನಗಳಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯಿಂದ ಈ ಸಂಬಂಧಕ್ಕೆ ಹೊಸ ದಿಕ್ಕು ದೊರೆಯಬಹುದು.

Category
ಕರಾವಳಿ ತರಂಗಿಣಿ