ನವದೆಹಲಿ: ಭಾರತೀಯ ನೌಕಾಪಡೆಗೆ ಸ್ವದೇಶಿ ನಿರ್ಮಿತ 3ನೇ ಪರಮಾಣು ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿದಮನ್ ಅನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು. ಇದು ಭಾರತದ ಜಲಾಂತರ್ಗಾಮಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನೌಕಾದಳದ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಹೇಳಿದ್ದಾರೆ. 2029ರೊಳಗೆ ಮೊದಲ 4 ರಫೇಲ್ ಮೆರೈನ್ ಫೈಟರ್ ಜೆಟ್ಗಳನ್ನು ನೌಕಾಪಡೆ ಹೊಂದುವ ನಿರೀಕ್ಷೆಯಿದೆ. 26 ರಫೇಲ್ ವಿಮಾನಗಳಿಗಾಗಿ ಏ.25ರಂದು ಭಾರತವು ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ 1.27 ಲಕ್ಷ ಕೋಟಿ ರೂ. ಮೌಲ್ಯದಲ್ಲಿ ಒಟ್ಟು 94 ಖರೀದಿ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ 47 ಹಡಗುಗಳೂ ಸೇರಿವೆ. ರಾಷ್ಟ್ರೀಯ ಕಡಲ ಡೊಮೇನ್ ಜಾಗೃತಿ (ಎನ್ಎಂಡಿಎ) ಯೋಜನೆಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.