image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತ ಮತ್ತು ರಷ್ಯಾ 'ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ನಡೆಯುತ್ತವೆ' : ಪುಟಿನ್ - ಮೋದಿ ಜಂಟಿ ಹೇಳಿಕೆ

ಭಾರತ ಮತ್ತು ರಷ್ಯಾ 'ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ನಡೆಯುತ್ತವೆ' : ಪುಟಿನ್ - ಮೋದಿ ಜಂಟಿ ಹೇಳಿಕೆ

ನವದೆಹಲಿ: ಭಾರತ ಮತ್ತು ರಷ್ಯಾ 'ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ನಡೆಯುತ್ತವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ದ್ವಿಪಕ್ಷೀಯ ಸಭೆ ನಂತರ ಇಂದು ಮಧ್ಯಾಹ್ನ ಹೈದರಾಬಾದ್‌ ಹೌಸ್​​ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ನಾಯಕರು, ಭಯೋತ್ಪಾದನೆಯನ್ನು ಎದುರಿಸಲು ಭಾರತದ ಪ್ರಯತ್ನಗಳಿಗೆ ಮಾಸ್ಕೋ ಬಲವಾದ ಬೆಂಬಲ ನೀಡುತ್ತಿದೆ ಮತ್ತು ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ನಂಟಿದೆ ಎಂಬ ಆರೋಪದ ನಂತರ ಅದು ಬಲವಾಗಿ ಪ್ರತಿಕ್ರಿಯಿಸಿದೆ. ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮಾಸ್ಕೋ, "ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭಾರತದೊಂದಿಗೆ ಕೈಜೋಡಿಸುವುದಾಗಿ" ಹೇಳಿದರು. ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯ ಮತ್ತು ಆ ದೇಶವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲವು ಭಾಗಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂದೂರ್‌ ಅನ್ನು ಮಾಸ್ಕೋ ಬೆಂಬಲಿಸಿತ್ತು.

"ಕಳೆದ ಎಂಟು ದಶಕಗಳಲ್ಲಿ, ಜಗತ್ತು ಹಲವಾರು ಏರಿಳಿತಗಳನ್ನು ಕಂಡಿದೆ". "ಮಾನವೀಯತೆ ಅನೇಕ ಸವಾಲುಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಇದೆಲ್ಲದರ ನಡುವೆಯೂ, ಭಾರತ-ರಷ್ಯಾ ಸ್ನೇಹವು ಧ್ರುವ ನಕ್ಷತ್ರದಂತೆ ಸ್ಥಿರವಾಗಿ ಉಳಿದಿದೆ. ಪರಸ್ಪರ ಗೌರವ ಮತ್ತು ಆಳವಾದ ನಂಬಿಕೆಯಲ್ಲಿ ಬೇರೂರಿರುವ ಈ ಸಂಬಂಧಗಳು ಯಾವಾಗಲೂ ಕಾಲದ ಪರೀಕ್ಷೆಯಲ್ಲಿ ನಿಂತಿವೆ ಎಂದು ಮೋದಿ ಹೇಳಿದರು. ಮೋದಿ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಭಾರತಕ್ಕೆ ತೈಲ ಪೂರೈಕೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ರಷ್ಯಾ ನಿಯೋಗಕ್ಕೆ ಆತ್ಮೀಯ ಮತ್ತು ಆತಿಥ್ಯದ ಸ್ವಾಗತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿ ಹಾಗೂ ಭಾರತದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಭೋಜನಕೂಟದಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ನನ್ನ ಮಾತುಕತೆಗಳು ನಮ್ಮ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಬಹಳ ಸಹಾಯಕವಾಗಿದ್ದವು ಎಂದು ಪುಟಿನ್ ತಿಳಿಸಿದರು.

Category
ಕರಾವಳಿ ತರಂಗಿಣಿ