ಅಮೆರಿಕ: ಬ್ರೆಜಿಲ್ನಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷರು ಬ್ರಿಕ್ಸ್ ನ ಅಮೆರಿಕ ವಿರೋಧಿ ನೀತಿಗಳನ್ನು ಅನುಸರಿಸುವ ರಾಷ್ಟ್ರಗಳಿಗೆ ಟ್ರಂಪ್ ಬೆದರಿಕೆಯೊಂದನ್ನು ಹಾಕಿದ್ದಾರೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಅಮೆರಿಕದ ಸುಂಕ ಹೆಚ್ಚಳವನ್ನು ವಿರೋಧಿಸಿದ ಕೆಲವೇ ಗಂಟೆಗಳ ಬಳಿಕ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ಬಣದಲ್ಲಿನ "ಅಮೆರಿಕ-ವಿರೋಧಿ" ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೇಶಗಳ ಮೇಲೆ ಹೆಚ್ಚುವರಿ 10 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.
"BRICSನ ಅಮೆರಿಕ-ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿ 10% ಸುಂಕವನ್ನು ವಿಧಿಸಲಾಗುವುದು. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು" ಎಂದು ಅಧ್ಯಕ್ಷ ಟ್ರಂಪ್ ನಿನ್ನೆ ರಾತ್ರಿ ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
BRICS ಈ ಬಣ ಮೊದಲು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ದೇಶಗಳನ್ನು ಒಳಗೊಂಡಿತ್ತು. 2024ರಲ್ಲಿ ಈ ಬಣಕ್ಕೆ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೈಡ್ ಅರಬ್ ಎಮಿರೇಟ್ಸ್(UAE) ದೇಶಗಳು ಇದರೊಂದಿಗೆ ಸೇರಿಕೊಂಡು ಬಣ ವಿಸ್ತರಿಸಿದೆ. ಬಳಿಕ 2025 ಅಂದರೆ ಈ ವರ್ಷ ಇಂಡೋನೇಷ್ಯಾ ಕೂಡ ಸೇರಿಕೊಂಡಿದೆ.
ಡೊನಾಲ್ಡ್ ಟ್ರಂಪ್ ಇನ್ನೊಂದು ಪೋಸ್ಟ್ ಕೂಡಾ ಹಂಚಿಕೊಂಡಿದ್ದಾರೆ. ಅದರಲ್ಲಿ " ಅಮೆರಿಕ ವಿವಿಧ ದೇಶಗಳಿಗೆ ಸುಂಕ ಹಾಗೂ ಒಪ್ಪಂದಗಳ ಕುರಿತಅದ ಪತ್ರಗಳನ್ನು ಕಳುಹಿಸಲಿದೆ. ಮತ್ತು ಜಗತ್ತಿನಾದ್ಯಂತದ ವಿವಿಧ ದೇಶಗಳೊಂದಿಗೆ ಅಮೆರಿಕದ ಸುಂಕದ ಪತ್ರ ಹಾಗೂ ಒಪ್ಪಂದಗಳನ್ನು ಜುಲೈ 7(ಇಂದು) ಮಧ್ಯಾಹ್ನ 12 ಗಂಟೆಗೆ ವಿತರಿಸಲಾಗುವುದು ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ" ಎಂದೂ ಅವರು ತಿಳಿಸಿದ್ದಾರೆ.