ಅಮೇರಿಕ : ಭಾರತದ ವಿರುದ್ಧ ಅಬ್ಬರಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಕೊಂಚ ತಣ್ಣಗಾದಂತೆ ಭಾಸವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನನ್ನ ಸದಾಕಾಲದ ಗೆಳೆಯ. ನರೇಂದ್ರ ಮೋದಿ ಒಬ್ಬ ಅದ್ಬುತವಾದ ವ್ಯಕ್ತಿಯಾಗಿದ್ದಾರೆ. ಆದರೆ ಸದ್ಯ ನರೇಂದ್ರ ಮೋದಿ ಅವರ ನಡೆಯ ಬಗ್ಗೆ ನನಗೆ ಸಹಮತವಿಲ್ಲ ಅಷ್ಟೇ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಅಮೇರಿಕಾ ನಡುವೆ ವಿಷೇಶವಾದ ಸಂಬಂಧವಿದೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಟ್ರಂಪ್ ಈ ಹೇಳಿಕೆ ನಮೋ ಕೂಡ ಪ್ರತಿಕ್ರಿಯಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಹೇಳಿಕೆಯ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ರೀ ಪೋಸ್ಟ್ ಮಾಡಿರುವ ಮೋದಿ, ಟ್ರಂಪ್ ರವರ ಭಾವನೆಗಳನ್ನ ಮತ್ತು ಅವರ ಸಕಾರಾತ್ಮಕತೆಗೆ ನಾನು ಪ್ರಶಂಶಿಸುತ್ತೆನೆ. ಅವರ ಭಾವನೆಗಳಿಗೆ ಸಂಪೂರ್ಣ ಸ್ಪಂದಿಸುತ್ತೆನೆ.ಭಾರತ ಮತ್ತು ಅಮೆರಿಕಾ ಬಹಳ ಸಕಾರಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದಿಂದ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದಲ್ಲಿ ಜೊತೆಯಲ್ಲಿ ನಿಲ್ಲಲಿದೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.