ಅಮೇರಿಕಾ : ಅಮೇರಿಕಾದ ಟೆಕ್ಸಾಸ್ ರಾಜ್ಯದ ರಾಜ್ಯಪಾಲ ಟೆಡ್ ಅಬಾಟ್ ಅವರು ಸೆಪ್ಟೆಂಬರ್ 8 ರಂದು ಎಲ್ಲಾ ಶರಿಯಾ ಕಾನೂನುಗಳನ್ನು ನಿಷೇಧಿಸುವುದಾಗಿ ಘೋಷಿಸಿದರು. ಅಮೇರಿಕಾ 2010 ರಲ್ಲಿ ತನ್ನ ರಾಜ್ಯಗಳಲ್ಲಿ ಶರಿಯಾ ಕಾನೂನುಗಳನ್ನು ರದ್ದುಪಡಿಸಲು ನಿರ್ಧರಿಸಿತ್ತು. ಈ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಂಡ ಅಮೇರಿಕಾದ 50 ರಾಜ್ಯಗಳಲ್ಲಿ ಟೆಕ್ಸಾಸ್ 18ನೇ ರಾಜ್ಯವಾಯಿತು. ರಾಜ್ಯದ ರಾಜಧಾನಿ ಹೂಸ್ಟನ್ ನಲ್ಲಿನ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿತ್ತು. ಅದರಲ್ಲಿ ಒಬ್ಬ ಇಮಾಮ್ ಅಂಗಡಿಯವರಿಗೆ, ಇಸ್ಲಾಂನಲ್ಲಿ 'ಹರಾಮ್' (ನಿಷಿದ್ಧ) ಆಗಿರುವುದರಿಂದ ಮದ್ಯ, ಹಂದಿ ಮಾಂಸ ಮತ್ತು ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡಬಾರದು ಎಂದು ಧ್ವನಿವರ್ಧಕದಿಂದ ಆದೇಶಿಸುತ್ತಿರುವುದು ಕಂಡುಬಂದಿದೆ. ಈ ಘಟನೆಯ ಕುರಿತು ಅಬಾಟ್ ಅವರು ಪ್ರತಿಕ್ರಿಯೆ ನೀಡಿ, "ಟೆಕ್ಸಾಸ್ ನಲ್ಲಿ ಶರಿಯಾ ಕಾನೂನುಗಳನ್ನು ನಿಷೇಧಿಸುವ ಕಾನೂನಿಗೆ ನಾನು ಸಹಿ ಹಾಕಿದ್ದೇನೆ. ಯಾವುದೇ ವ್ಯಾಪಾರ ಸಂಸ್ಥೆ ಅಥವಾ ಯಾವುದೇ ವ್ಯಕ್ತಿ ಇಂತಹ ಮೂರ್ಖರಿಗೆ ಹೆದರಬಾರದು. ಈ ವ್ಯಕ್ತಿ ಅಥವಾ ಯಾರಾದರೂ ಶರಿಯಾ ಕಾನೂನುಗಳನ್ನು ಹೇರಲು ಪ್ರಯತ್ನಿಸಿದರೆ, ಸ್ಥಳೀಯ ಕಾನೂನು ಜಾರಿ ಅಥವಾ ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆಗೆ ದೂರು ನೀಡಿ," ಎಂದು ಸೆಪ್ಟೆಂಬರ್ 9 ರಂದು 'ಎಕ್ಸ್' (X) ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.