image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಇಂದಿನಿಂದ ಪುನಾರಂಭ

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಇಂದಿನಿಂದ ಪುನಾರಂಭ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಇಂದಿನಿಂದ ಪುನಾರಂಭಗೊಳ್ಳಲಿದೆ. ಅಮೆರಿಕದ ಮುಖ್ಯ ವ್ಯಾಪಾರ ಸಮಾಲೋಚಕ ಬ್ರೆಂಡನ್ ಲಿಂಚ್ ತಂಡ ನವದೆಹಲಿಗೆ ಆಗಮಿಸಿದ್ದು, ಬಹು ನಿರೀಕ್ಷಿತ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೇಲೆ ಎರಡು ರಾಷ್ಟ್ರಗಳು ಚರ್ಚೆ ನಡೆಸಲಿವೆ. ಉಭಯ ದೇಶಗಳ ನಡುವಿನ ಈ ಬೆಳವಣಿಗೆಯನ್ನು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬಾರ್ತ್ವಾಲ್ ದೃಢಪಡಿಸಿದ್ದಾರೆ. ಭಾರತವು ಅಮೆರಿಕದೊಂದಿಗೆ ಮಾತ್ರವಲ್ಲದೆ, ಇತರ ಹಲವು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಅನುಸರಿಸಲು ಮುಕ್ತವಾಗಿದೆ ಎಂದಿದ್ದಾರೆ. ಭಾರತದ ಜಿಎಸ್​ಟಿ ಸುಧಾರಣೆಗಳ ಕುರಿತು ಎಫ್​ಟಿಎ ಉಪಕ್ರಮಗಳ ಬಗ್ಗೆ ಇತರ ದೇಶಗಳಿಗೆ ತಿಳಿಸಲು ವಿವಿಧ ಕಾರ್ಯಾಚರಣೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ವ್ಯಾಪಾರ ಮಾತುಕತೆಗಳಿಗೆ ನಮ್ಮ ಸಾಮರ್ಥ್ಯವು ಗಮನಾರ್ಹವಾಗಿ ಸುಧಾರಿಸಿದೆ. ಅನೇಕ ಉತ್ಪನ್ನಗಳಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು ಜಾರಿಯಲ್ಲಿವೆ. ಹೆಚ್ಚು ಹೆಚ್ಚು ಎಫ್​ಟಿಎಗಳೊಂದಿಗೆ ಮುಂದುವರಿಯಲು ನಾವು ಚೆನ್ನಾಗಿ ಸಿದ್ಧರಿದ್ದೇವೆ ಎಂದರು.

ಭಾರತ ಮತ್ತು ಅಮೆರಿಕ ನಡುವೆ ಈಗಾಗಲೇ ಐದು ಸುತ್ತಿನ ವ್ಯಾಪಾರ ಮಾತುಕತೆಗಳು ನಡೆದಿವೆ. ಆರನೇ ಸುತ್ತಿನ ಮಾತುಕತೆಯನ್ನು ಈ ಮುಂಚೆ ಆಗಸ್ಟ್​ 25 ರಿಂದ 29ರ ವರೆಗೆ ನಿಗದಿಸಲಾಗಿತ್ತು. ಆದರೆ ನಂತರ ಅದನ್ನು ಮುಂದೂಡಲಾಗಿತ್ತು. ಇದೀಗ ಇಂದು ಆರನೇ ಸುತ್ತಿನ ಸಭೆ ನಡೆಸಲು ಮುಂದಾಗಿದೆ. ಇತರ ಪಾಲುದಾರರನ್ನು ಒಳಗೊಂಡಂತೆ ಭಾರತದ ವಿದೇಶಾಂಗ ಸಚಿವಾಲಯವು ಈ ಮಾತುಕತೆಯಲ್ಲಿ ಭಾಗಿಯಾಗಲಿದೆ ಎಂದು ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದರು. ಸಭೆಯ ಪ್ರಮುಖ ನಿರೀಕ್ಷೆ: ಈ ಮಾತುಕತೆಯಲ್ಲಿ ಭಾರತವು ರಷ್ಯಾದಿಂದ ಕಚ್ಛಾತೈಲ ಆಮದನ್ನು ಕಡಿಮೆ ಮಾಡುವ ಕುರಿತು ಅಮೆರಿಕ ಮಾತನಾಡುವ ಸಾಧ್ಯತೆ ಇದೆ. ಜೊತೆಗೆ ಅಮೆರಿಕ ಸುಂಕದ ವಿರುದ್ಧ ಭಾರತದ ಕಳವಳದ ಕರಿತು ಚರ್ಚೆಯಲ್ಲಿ ಮಾತುಕತೆ ನಡೆಸಲಾಗುವುದು. ಈ ಮೂಲಕ ಅವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಕೆಲಸ ಮಾಡಲಾಗುವುದು. ಸುಂಕಗಳು ಸೇರಿದಂತೆ ಎಲ್ಲಾ ಪ್ರಮುಖ ವಿಷಯಗಳ ಮೇಲೆ ಭಾರತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ