image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ

ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ

ಟೆಲ್ ಅವಿವ್ : ಅಮೆರಿಕಾ ಬೆಂಬಲ ತೀವ್ರಗೊಳಿಸುತ್ತಿದ್ದಂತೆ ಇಸ್ರೇಲ್‌ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಇಸ್ರೇಲ್ ದಾಳಿಗೆ ಗಾಜಾದಲ್ಲಿರುವು ಕಟ್ಟಡಗಳು ಹೊತ್ತಿ ಉರಿಯುತ್ತಿರುವ ವೀಡಿಯೋಗಳು ವೈರಲ್ ಆಗಿವೆ. ಹಮಾಸ್‌ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೊಸ ಮಿಲಿಟರಿ ದಾಳಿಗೆ ಅಮೆರಿಕಾ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಭರವಸೆ ನೀಡಿದ ಕೆಲ ಗಂಟೆಗಳಲ್ಲಿ ಇಸ್ರೇಲ್ ಗಾಜಾದ ಮೇಲೆ ಭಾರಿ ವಾಯುದಾಳಿ ನಡೆಸಿದೆ. 

ಜೆರುಸೆಲೆಮ್‌ಗೆ ಭೇಟಿ ನೀಡಿದ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ, ಯುದ್ಧದಿಂದ ಹಾನಿಗೊಳಗಾದ ಪ್ಯಾಲೇಸ್ತೀನ್ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸುವ ಇಸ್ರೇಲ್, ನಮ್ಮ ಅಚ್ಚಲ ಬೆಂಬಲದ ಮೇಲೆ ನಂಬಿಕೆ ಇಡಬಹುದು ಎಂದ ಅವರು ಕತಾರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಪ್ರಯತ್ನಗಳನ್ನು ತಿರಸ್ಕರಿಸಿದಲ್ಲದೇ ಹಮಾಸ್‌ ಅನ್ನು ಅನಾಗರಿಕ ಪ್ರಾಣಿ ಎಂದು ಕರೆದಿದ್ದಾರೆ. ನವರೋ ಈ ಹೇಳಿಕೆಯ ನಂತರ ಗಾಜಾದ ಮೇಲೆ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಜಾದಲ್ಲಿದ್ದ ವಸತಿ ಕಟ್ಟಡಗಳು ಇಸ್ರೇಲ್‌ ದಾಳಿಯಿಂದ ಸಂಪೂರ್ಣ ಧ್ವಂಸಗೊಂಡಿದ್ದು, ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ನಾವು ಅವರ ಕಿರುಚಾಟವನ್ನು ಕೇಳಿದೆವು ಎಂದು 25 ವರ್ಷ ನಿವಾಸಿ ಅಹ್ಮದ್ ಗಜಲ್ ಹೇಳಿದ್ದಾರೆ. ಗಾಜಾದ ಮೇಲೆ ರಾತ್ರಿ ಇಡೀ ನಡೆದ ವೈಮಾನಿಕ ದಾಳಿಯ ನಂತರ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಇಂದು ಹೇಳಿಕೆ ನೀಡಿದ್ದು, ಗಾಜಾ ಹೊತ್ತಿ ಉರಿಯುತ್ತಿದೆ. ಇಸ್ರೇಲ್ ಈ ಪ್ರದೇಶದ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದರು. ಹೆಚ್ಚಿನ ದಾಳಿ ನಡೆಸುವ ಮೊದಲು ಇಸ್ರೇಲ್ ಸೇನೆ ಅಲ್ಲಿದ್ದ ನಾಗರಿಕರಿಗೆ ಹೊರ ಹೋಗುವಂತೆ ಒತ್ತಾಯಿಸಿದೆ. ಈಗಾಗಲೇ ಗಾಜಾದಿಂದ ಲಕ್ಷಾಂತರ ಜನ ವಲಸೆ ಹೋಗಿದ್ದಾರೆ. ಆದರೆ ಅಷ್ಟೇ ಜನ ಅಲ್ಲಿ ಇನ್ನೂ ಇದ್ದಾರೆ. ಅಲ್ಲಿರುವ ಜನರಿಗೆ ಹಮಾಸ್ ಸ್ಥಳದಲ್ಲೇ ಇರುವಂತೆ ಕರೆ ನೀಡಿದ್ದು, ಇದರಿಂದ ಮೊದಲೇ ಸರಿಯಾದ ಅನ್ನಾಹಾರವಿಲ್ಲದೇ ಬಳಲುತ್ತಿರುವ ಗಾಜಾದ ನಿವಾಸಿಗಳಿಗೆ ಧರ್ಮ ಸಂಕಟವಾಗಿದೆ. ಒಂದೋ ಅಲ್ಲೇ ಇದ್ದು ಸಾಯಬೇಕು, ಅಥವಾ ಓಡಿ ಹೋಗುವ ಪ್ರಯತ್ನ ಮಾಡಿದರು ಬದುಕುಳಿಯುತ್ತೇವೆ ಎಂಬ ಯಾವ ಭರವಸೆಯೂ ಇಲ್ಲವಾಗಿದೆ.

ಇಲ್ಲಿ ಇಸ್ರೇಲಿ ಪಡೆಗಳು ಈಗಾಗಲೇ ಕನಿಷ್ಠ ನಾಲ್ಕು ಪೂರ್ವ ಉಪನಗರಗಳಲ್ಲಿ ವಾರಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಅವುಗಳಲ್ಲಿ ಮೂರು ಭಾಗಗಳ ದೊಡ್ಡ ಭಾಗಗಳನ್ನು ತಮ್ಮ ದಾಳಿಯಿಂದಾಗಿ ಬಂಜರು ಭೂಮಿಯಾಗಿ ಪರಿವರ್ತಿಸುಸಿವೆ. ಸೈನ್ಯವು ಈಗ ಮಧ್ಯ ಮತ್ತು ಪಶ್ಚಿಮ ಗಾಜಾವನ್ನು ಸಮೀಪಿಸುತ್ತಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಮಾನವೀಯ ವಲಯ ಎಂದು ಗೊತ್ತುಪಡಿಸಿರುವ ದಕ್ಷಿಣದಲ್ಲಿಯೂ ಸುರಕ್ಷತೆ ಅಥವಾ ಸ್ಥಳಾವಕಾಶದ ಕೊರತೆ ಇದೆ. ಹೀಗಾಗಿ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಅನೇಕ ನಾಗರಿಕರು ಹೇಳುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಹಾಗೆಯೇ ಇತರರು ಕೂಡ ತಮಗೆ ಸ್ಥಳಾಂತರಗೊಳ್ಳುವಷ್ಟು ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂದು ಹೇಳುತ್ತಿದ್ದು, ಕತಾರ್‌ನಲ್ಲಿ ಸಭೆ ಸೇರುವ ಅರಬ್ ನಾಯಕರು ಇಸ್ರೇಲ್ ತನ್ನ ಯೋಜನೆಗಳನ್ನು ನಿಲ್ಲಿಸುವಂತೆ ಒತ್ತಡ ಹೇರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

ಕಳೆದ ವಾರದಲ್ಲಿ ಗಾಜಾ ನಗರದ ಮೇಲೆ ಐದು ಸುತ್ತಿನ ವಾಯುದಾಳಿಗಳನ್ನು ನಡೆಸಿದ್ದು, 500 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲಿ ಸೇನೆ ಹೇಳಿದೆ. ಇವುಗಳಲ್ಲಿ ಹಮಾಸ್ ವಿಚಕ್ಷಣ ಮತ್ತು ಸ್ನೈಪರ್ ಸ್ಥಾನಗಳು, ಸುರಂಗಗಳು ಮತ್ತು ಶಸ್ತ್ರಾಸ್ತ್ರಗಳ ಡಿಪೋಗಳು ಸೇರಿವೆ ಎಂದು ಇಸ್ರೇಲ್ ಹೇಳಿದೆ. ಇತ್ತ ಭಾನುವಾರ ಈ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ 11 ರಿಂದ ಇಸ್ರೇಲಿ ಪಡೆಗಳು ಕನಿಷ್ಠ 1,600 ವಸತಿ ಕಟ್ಟಡಗಳು ಹಾಗೂ 13,000 ಡೇರೆಗಳನ್ನು ನಾಶಪಡಿಸಿದೆ ಎಂದು ಹಮಾಸ್ ಹೇಳಿದೆ.

Category
ಕರಾವಳಿ ತರಂಗಿಣಿ