image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮ ಜನ್ಮಭೂಮಿ, ಮಥುರಾ ಮತ್ತು ಜ್ಞಾನವಾಪಿಯನ್ನು ಮುಸ್ಲಿಮರು ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು : ಎಎಸ್‌ಐ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್

ರಾಮ ಜನ್ಮಭೂಮಿ, ಮಥುರಾ ಮತ್ತು ಜ್ಞಾನವಾಪಿಯನ್ನು ಮುಸ್ಲಿಮರು ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು : ಎಎಸ್‌ಐ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್

ನವದೆಹಲಿ : ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಅವರು ನಡೆಯುತ್ತಿರುವ ಮಂದಿರ-ಮಸೀದಿ ವಿವಾದಗಳ ವಿಚಾರದಲ್ಲಿ ಸಂಯಮ ವಹಿಸುವಂತೆ ಕರೆ ನೀಡಿದ್ದಾರೆ. ದೇಶದಲ್ಲಿ ರಾಮ ಜನ್ಮಭೂಮಿ, ಮಥುರಾ ಮತ್ತು ಜ್ಞಾನವಾಪಿ ಎಂಬ ಮೂರು ಸ್ಥಳಗಳು ಮಾತ್ರ ಚರ್ಚೆಯ ಕೇಂದ್ರಬಿಂದುವಾಗಿರಬೇಕು ಎಂದು ತಿಳಿಸಿದ್ದಾರೆ. ಮುಸ್ಲಿಮರು ಈ ಸ್ಥಳಗಳನ್ನು ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಮತ್ತೊಂದೆಡೆ ಹಿಂದೂಗಳು ಹೆಚ್ಚಿನ ಬೇಡಿಕೆಗಳನ್ನು ಇಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೀಗೆ ಭೂ ಮಾಲೀಕತ್ವದ ವ್ಯಾಜ್ಯವನ್ನು ವಿಸ್ತರಿಸುವುದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತವೆ ಎಂದರು. ದೇಶಾದ್ಯಂತ ದೇವಾಲಯ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವಾಗ ಮುಹಮ್ಮದ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಮುಹಮ್ಮದ್, ರಾಮ ಜನ್ಮಭೂಮಿಯನ್ನು ಹೊರತುಪಡಿಸಿ ಮಥುರಾ ಮತ್ತು ಜ್ಞಾನವಾಪಿ ಎರಡು ಸ್ಥಳಗಳಾಗಿದ್ದು, ಅವು "ಮೆಕ್ಕಾ ಮತ್ತು ಮದೀನಾ ಮುಸ್ಲಿಮರಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಹಿಂದೂ ಸಮುದಾಯಕ್ಕೆ" ಎಂದು ವಿಶ್ಲೇಷಿಸಿದ್ದಾರೆ.

ಅಯೋಧ್ಯಾ ವಿವಾದದ ಬಗ್ಗೆ ಮಾತನಾಡಿದ ಮುಹಮ್ಮದ್, ಮಾಜಿ ಎ.ಎಸ್.ಐ. ಉನ್ನತ ಅಧಿಕಾರಿ ಬಿ.ಬಿ. ಲಾಲ್ ನೇತೃತ್ವದಲ್ಲಿ 1976 ರಲ್ಲಿ ಬಾಬರಿ ಮಸೀದಿಯ ಉತ್ಖನನದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಹೀಗೆ... ಕಮ್ಯುನಿಸ್ಟ್ ಇತಿಹಾಸಕಾರರ ಪ್ರಭಾವದಿಂದಾಗಿ ಈ ವಿವಾದ ಬೆಳೆಯಿತು ಎಂದು ತಿಳಿಸಿದರು. ಮಸೀದಿಯ ಕೆಳಗೆ ದೇವಾಲಯವಿತ್ತು ಎಂಬ ಪುರಾವೆಗಳನ್ನು ತಿರಸ್ಕರಿಸಲು ಇತಿಹಾಸಕಾರ ಮುಸ್ಲಿಂ ಸಮುದಾಯದ ಮನವೊಲಿಸಿದ್ದರು. ಮುಹಮ್ಮದ್ ಅವರ ಪ್ರಕಾರ, ಹೆಚ್ಚಿನ ಮುಸ್ಲಿಮರು ಆರಂಭದಲ್ಲಿ ವಿವಾದಿತ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಒಲವು ತೋರಿದ್ದರು.ಇತಿಹಾಸಕಾರರು ಪುರಾತತ್ವಶಾಸ್ತ್ರಜ್ಞರಲ್ಲ ಮತ್ತು ಉತ್ಖನನದ ಯಾವುದೇ ಹಂತದಲ್ಲೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಮುಹಮ್ಮದ್ ಪ್ರತಿಪಾದಿಸಿದರು. 

Category
ಕರಾವಳಿ ತರಂಗಿಣಿ