image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಯೋಧ್ಯೆಯಲ್ಲಿ ಪ್ರಸ್ತಾವಿತ ದೇವಾಲಯ ವಸ್ತು ಸಂಗ್ರಹಾಲಯ ವಿಸ್ತರಿಸಲು ಉತ್ತರ ಪ್ರದೇಶ ಸಚಿವ ಸಂಪುಟ ಒಪ್ಪಿಗೆ

ಅಯೋಧ್ಯೆಯಲ್ಲಿ ಪ್ರಸ್ತಾವಿತ ದೇವಾಲಯ ವಸ್ತು ಸಂಗ್ರಹಾಲಯ ವಿಸ್ತರಿಸಲು ಉತ್ತರ ಪ್ರದೇಶ ಸಚಿವ ಸಂಪುಟ ಒಪ್ಪಿಗೆ

ಉತ್ತರಪ‍್ರದೇಶ: ಅಯೋಧ್ಯೆಯಲ್ಲಿ ಪ್ರಸ್ತಾವಿತ ದೇವಾಲಯ ವಸ್ತು ಸಂಗ್ರಹಾಲಯ ವಿಸ್ತರಿಸಲು ಉತ್ತರ ಪ್ರದೇಶ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. 52 ಎಕರೆ ಜಾಗದಲ್ಲಿ ಸಂಗ್ರಹಾಲಯವು ನಿರ್ಮಾಣವಾಗಲಿದ್ದು, ಟಾಟಾ ಸನ್ಸ್‌ ಸಂಸ್ಥೆಯು ಅಭಿವೃದ್ಧಿಪಡಿಸಿ, ನಿರ್ವಹಿಸಲಿದೆ. ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಖಾತೆ ಸಚಿ ಸುರೇಶ್‌ ಕುಮಾರ್‌ ಖನ್ನಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಅತ್ಯಾಧುನಿಕ ವಸ್ತು ಸಂಗ್ರಹಾಲಯವನ್ನು ಸ್ಥಾ‍ಪಿಸಲು ಟಾಟಾ ಸನ್ಸ್‌ ಸಂಸ್ಥೆ ಆಸಕ್ತಿ ವಹಿಸಿದ್ದು, ವಿಶೇಷ ಉದ್ದೇಶ ಘಟಕ (ಎಸ್‌ಪಿವಿ)ದ ಮೂಲಕ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ಅಡಿಯಲ್ಲಿ ನಿರ್ವಹಿಸಲು ಒಪ್ಪಿಗೆ ನೀಡಿದೆ. ಎಸ್‌ಪಿವಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಇರಲಿದ್ದಾರೆ' ಎಂದು ಖನ್ನಾ ತಿಳಿಸಿದ್ದಾರೆ.

ಮ್ಯೂಸಿಯಂ ನಿರ್ಮಾಣ ಹಾಗೂ ಜಾಗ ಮಂಜೂರಾತಿ ಕುರಿತಂತೆ 2024ರ ಸೆಪ್ಟೆಂಬರ್‌ 3ರಂದೇ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಟಾಟಾ ಸನ್ಸ್‌ನ ಪ್ರತಿನಿಧಿಗಳ ಜೊತೆ ಒಡಂಬಡಿಕೆ ನಡೆದಿತ್ತು. ಇದರಂತೆ, ಅಯೋಧ್ಯೆಯ ಜಮತಾರಾ ಗ್ರಾಮದಲ್ಲಿ 25 ಎಕರೆ ಜಮೀನು ಮಂಜೂರು ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಯೋಜನೆಯ ವಾಸ್ತುಶಿಲ್ಪದ ಭವ್ಯತೆಯನ್ನು ಜಾರಿಗೊಳಿಸಲು ಹೆಚ್ಚುವರಿ ಜಮೀನು ನೀಡುವಂತೆ ಟಾಟಾ ಸನ್ಸ್ ಸಂಸ್ಥೆ ಮನವಿ ಮಾಡಿತ್ತು. ಅದರ ಅನ್ವಯ, ಹೆಚ್ಚುವರಿಯಾಗಿ 27.102 ಎಕರೆ ಭೂಮಿಯನ್ನು ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. 52.102 ಎಕರೆ ಭೂಮಿಯಲ್ಲಿ ಒಟ್ಟು ಯೋಜನೆಯು ಜಾರಿಯಾಗಲಿದೆ' ಎಂದು ಸಚಿವ ಸುರೇಶ್‌ ಕುಮಾರ್‌ ಖನ್ನಾ ತಿಳಿಸಿದ್ದಾರೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಾಣಪ್ರತಿಷ್ಠೆಯಾದ ಬಳಿಕ ಭಕ್ತರ ಸಂಖ್ಯೆಯು ತೀವ್ರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ನಿತ್ಯವೂ 2 ಲಕ್ಷದಿಂದ 4 ಲಕ್ಷ ಭಕ್ತರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ.

Category
ಕರಾವಳಿ ತರಂಗಿಣಿ