image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಮುದ್ರ ಭಾಗದಲ್ಲಿ ತೇಲುವ ಅಣು ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡುವ ಪ್ರಸ್ತಾಪ ಭಾರತದ ಮುಂದಿರಿಸಿದ ರಷ್ಯಾ

ಸಮುದ್ರ ಭಾಗದಲ್ಲಿ ತೇಲುವ ಅಣು ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡುವ ಪ್ರಸ್ತಾಪ ಭಾರತದ ಮುಂದಿರಿಸಿದ ರಷ್ಯಾ

ನವದೆಹಲಿ: ಭಾರತದ ನಿಯಂತ್ರಣದಲ್ಲಿರುವ ಯಾವುದಾದರೂ ಸಮುದ್ರ ಭಾಗದಲ್ಲಿ ತೇಲುವ ಅಣು ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡುವ ಪ್ರಸ್ತಾಪವನ್ನು ರಷ್ಯಾ ಭಾರತದ ಮುಂದಿರಿಸಿದೆ. ತಮಿಳುನಾಡಿನ ಕೂಡುಕುಳಂ ಜತೆಗೆ ಮತ್ತೊಂದು ಅಣುಸ್ಥಾವರ ನಿರ್ಮಿಸುವ ಬಗ್ಗೆ ನಡೆದ ಮಾತುಕತೆ ವೇಳೆ ಈ ವಿಷಯ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಈಗಾಗಲೇ ರಷ್ಯಾ ತೇಲುವ ಅಣುಸ್ಥಾವ ನಿರ್ಮಾಣ ಮಾಡಿದ್ದು, ಇದನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ. ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಇದು ನೆರವಾಗಲಿದ್ದು, ಭಾರತಕ್ಕೆ ಅವಶ್ಯವಿರುವ ವಿದ್ಯುತ್ತನ್ನು ಇದರಿಂದ ಪಡೆದುಕೊಳ್ಳಬಹುದು. ಅಲ್ಲದೇ ಶುದ್ಧ ಇಂಧನ ಉತ್ಪಾದಿಸುವ ಗುರಿಯನ್ನು ಸಾಕಾರಗೊಳಿಸಲು ಇದು ನೆರವಾಗಲಿದೆ ಎಂದು ವರದಿಗಳು ತಿಳಿಸಿವೆ. ಭೂಮಿಯ ಮೇಲೆ ಬೃಹತ್‌ ಅಣುಸ್ಥಾವರಗಳನ್ನು ನಿರ್ಮಾಣ ಮಾಡುವ ಬದಲು ಸಣ್ಣ ಸಣ್ಣ ರಿಯಾಕ್ಟರ್‌ಗಳನ್ನು ಹಡಗುಗಳ ಮೇಲೆ ತೇಲಿಬಿಟ್ಟು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ಸಾಗರ ಪ್ರದೇಶವು ಬೃಹತ್ತಾಗಿರುವ ಕಾರಣ, ಇದರ ಬಳಕೆ ಸಲಭ ಎಂಬುದು ರಷ್ಯಾದ ವಾದವಾಗಿದೆ. 'ಅಕಾಡೆಮಿಕ್‌ ಲೊಮೊನ್‌ಸೋವ್‌ ಹೆಸರಿನಲ್ಲಿ ಈಗಾಗಲೇ ಇಂತಹ ಅಣು ವಿದ್ಯುತ್‌ ಸ್ಥಾವರವನ್ನು ರಷ್ಯಾ ನಿರ್ಮಿಸಿದೆ.

ಇಂತಹ ಅಣುಸ್ಥಾವರಗಳ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಇದನ್ನು ಹಿಮದ ಮೇಲಿನ ಚರ್ನೋಬಿಲ್‌ ಎಂದು ಕರೆಯಲಾಗುತ್ತಿದೆ. ಚರ್ನೋಬಿಲ್‌ನಲ್ಲಿ ನಡೆದ ದುರಂತವನ್ನು ನೆನಪಿಸುವ ಉದ್ದೇಶದಿಂದ ಈ ಪದವನ್ನು ಬಳಸಲಾಗುತ್ತಿದೆ. ನೀರಿನ ಮೇಲೆ ಅಣುಸ್ಥಾವರ ನಿರ್ಮಾಣ ಮಾಡುವುದರಿಂದ ಅಪಾಯದ ಪ್ರಮಾಣ ಹೆಚ್ಚು ಎಂಬುದು ವಿಜ್ಞಾನಿಗಳ ವಾದವಾಗಿದೆ. ಮಿಲಿಟರಿ ಹಾರ್ಡ್‌ವೇರ್‌ಗಳು, ರಷ್ಯಾ ಮೂಲದ ಶಸ್ತ್ರಾಸ್ತ್ರಗಳು, ಉಪಕರಣಗಳ ನಿರ್ವಹಣೆಗೆ ಅಗತ್ಯವಿರುವ ಬಿಡಿಭಾಗಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಲು ರಷ್ಯಾ ಸಮ್ಮತಿಸಿದೆ. ಶುಕ್ರವಾರ ನಡೆದ 23ನೇ ರಷ್ಯಾ-ಭಾರತ ವಾರ್ಷಿಕ ಶೃಂಗಸಭೆಯಲ್ಲಿ ಈ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ. ಮೇಕ್-ಇನ್-ಇಂಡಿಯಾ ಉಪಕ್ರಮದಡಿ ತಂತ್ರಜ್ಞಾನ ವರ್ಗಾವಣೆ ಮೂಲಕ ಈ ಪ್ರಕ್ರಿಯೆ ನಡೆಯಲಿದೆ.

Category
ಕರಾವಳಿ ತರಂಗಿಣಿ