image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸುಮಾರು 2,900 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾದ ತಮಿಳುನಾಡು ಸರಕಾರ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸುಮಾರು 2,900 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾದ ತಮಿಳುನಾಡು ಸರಕಾರ

ಕೃಷ್ಣಗಿರಿ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇನ್ನೂ ಜಾಗ ಜಾಗ ನಿಗದಿಯಾಗಿಲ್ಲ. ಆದರೆ ತಲಾ 4,500 ಎಕರೆಗಳನ್ನು ಗುರುತಿಸಿ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಟೆಂಡರ್ ಕರೆದಿದೆ. ಆದರೆ ಪಕ್ಕದ ತಮಿಳುನಾಡು ಸರ್ಕಾರ ಬೆಂಗಳೂರಿನ ಸಮೀಪದಲ್ಲೇ ಹೊಸ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸುಮಾರು 2,900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಭಾಗದಲ್ಲಿ ಸರ್ಕಾರಿ ಸ್ವಾಮ್ಯದ 800 ಎಕರೆ ಸೇರಿದಂತೆ 2,900 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರವಾದ ಹೊಸೂರು ಸಮೀಪ ಈ ಹೊಸ ವಿಮಾನ ನಿಲ್ದಾಣ ತಲೆ ಎತ್ತಲಿದೆ. ಕರ್ನಾಟಕಕ್ಕೆ ಟಕ್ಕರ್‌ ಕೊಡಲು ಮುಂದಾಗಿರುವ ತಮಿಳುನಾಡು, ತನ್ನ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ವಿವರವಾದ ತಾಂತ್ರಿಕ ಆರ್ಥಿಕ ವರದಿ (ಡಿಟಿಇಆರ್) ತಯಾರಿಸುವ ಸಲುವಾಗಿ ಸಲಹೆಗಾರರನ್ನು ಆಯ್ಕೆ ಮಾಡಲು ಸರ್ಕಾರ ಕಳೆದ ತಿಂಗಳೇ ಟೆಂಡರ್ ಕರೆದಿತ್ತು. ಅಲ್ಲದೆ ಸ್ಥಳ ಅನುಮತಿಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮೆಟ್ಟಿಲೇರಿತ್ತು.

ಹೊಸೂರು ವಿಮಾನ ನಿಲ್ದಾಣಕ್ಕೆ ಕೃಷಿ ಭೂಮಿಯೂ ಸೇರಿ 2,134 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಯೋಜನೆ ಉದ್ದೇಶಿಸಿದ್ದು, ಒಟ್ಟಾರೆ ವಿಮಾನ ನಿಲ್ದಾಣ ಯೋಜನೆಗಾಗಿ 2,979 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ. ಹೊಸೂರು ತಾಲ್ಲೂಕಿನ 10 ಗ್ರಾಮಗಳು ಹಾಗೂ ಶೂಲಗಿರಿ ತಾಲ್ಲೂಕಿನ 2 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ. ಕಾರುಪಲ್ಲಿ, ನಂದಿಮಂಗಲಂ, ಸೂಡುಕೊಂಡಪಲ್ಲಿ, ಮಿದುಡೆಪಲ್ಲಿ ಮತ್ತು ವೆಂಕಟೇಶಪುರಂ, ಬಲವನಪಲ್ಲಿ, ಮುತಾಲಿ, ಅತ್ತೂರು, ಅಲೆನಾಥಂ, ಅಡವನಪಲ್ಲಿ, ದಾಸಪಲ್ಲಿ, ಪೇಡ ಮುತಾಲಿ ಗ್ರಾಮಗಳಲ್ಲಿ ಈಗ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ. ಎಲ್‌ಡಿಪಿ ಅನುಮೋದನೆ ಪಡೆದ ನಂತರ ಇದನ್ನು ಆಡಳಿತಾತ್ಮಕ ಅನುಮೋದನೆಗಾಗಿ ವಿವಿಧ ಇಲಾಖೆಗಳಿಗೆ ಕಳುಹಿಸಿ ನಂತರ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ. ಇದಾದ ನಂತರ ಭೂಮಿಯನ್ನು ಸ್ವಾಧೀನ ಆರಂಭಗೊಳ್ಳಲಿದೆ. ಫೆಬ್ರವರಿ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಈಗ ಎಲ್ಲದಕ್ಕೂ ಅನುಮೋದನೆಗಳಿಗೆ ಕಾಯುತ್ತಿವೆ.

Category
ಕರಾವಳಿ ತರಂಗಿಣಿ