ನವದೆಹಲಿ: ಲೋಕಸಭೆಯಲ್ಲಿ 'ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025' ಮೇಲಿನ ಚರ್ಚೆ ಗುರುವಾರ ತಡರಾತ್ರಿವರೆಗೂ ನಡೆಯಿತು. ಸುಮಾರು 14 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ 98 ಸದಸ್ಯರು ಭಾಗಿಯಾಗಿದ್ದರು. ಕಲಾಪ ತಡರಾತ್ರಿ 1.35ರವರೆಗೂ ಮುಂದುವರಿದ ಕಾರಣ ಮುಂದೂಡಿಕೆಯಾಯಿತು. ಗುರುವಾರ ಚರ್ಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಲಿದ್ದಾರೆ. ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಪಕ್ಷಗಳ ಗದ್ದಲದ ನಡುವೆಯೂ ಮಸೂದೆಯನ್ನು ಮಂಡಿಸಿದ್ದರು.