ಮುಂಬೈ - ಗ್ರೇಟರ್ ಮುಂಬೈ ಪಾಲಿಕೆಯ ಮೇಯರ್ ಸ್ಥಾನಕ್ಕೆ ಬಿಜೆಪಿಯ ಕಾರ್ಪೊರೇಟರ್ ರಿತು ತಾವ್‌ಡೆ ಅವರನ್ನು ನಾಮನಿರ್ದೇಶನ ಮಾಡಿದರೆ,ಮಿತ್ರ ಪಕ್ಷ ಶಿವಸೇನೆ ಸಂಜಯ್ ಘಾಡಿ ಅವರನ್ನು ಉಪ ಮೇಯರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಬಿಜೆಪಿ ನಾಯಕ ಅಮಿತ್ ಸತಮ್ ತವ್‌ಡೆ ಅವರು ಬಿಜೆಪಿ ಮೇಯರ್ ಅಭ್ಯರ್ಥಿ ಹೆಸರನ್ನು ಘೋಷಿಸಿದರೆ, ಶಿವಸೇನೆ ನಾಯಕ ರಾಹುಲ್ ಶೇವಾಲೆ ಬಿಎಂಸಿ) ಪ್ರಧಾನ ಕಚೇರಿಯಲ್ಲಿ ಘಾಡಿ ಅವರ ಉಮೇದುವಾರಿಕೆಯನ್ನು ಘೋಷಿಸಿದರು. ತಾವ್‌ಡೆ ವಾರ್ಡ್ 132 ರಿಂದ ಕಾರ್ಪೊರೇಟರ್ ಆಗಿದ್ದರೆ, ಘಾಡಿ ವಾರ್ಡ್ 5 ರಿಂದ ಆಯ್ಕೆಯಾದರು.ಘಾಡಿ 15 ತಿಂಗಳ ಕಾಲ ಉಪ ಮೇಯರ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಶಿವಸೇನೆಯ ಕಾರ್ಯದರ್ಶಿ ಸಂಜಯ್ ಮೋರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಪಕ್ಷ ಬದಲಾಯಿಸಿದ ಹಿರಿಯ ಮಾಜಿ ಶಿವಸೇನೆ (ಯುಬಿಟಿ) ಕಾರ್ಪೊರೇಟರ್‌ಗಳಲ್ಲಿ ಅವರು ಒಬ್ಬರು.
ಮುಂಬೈನಲ್ಲಿ ಉಪ ಮೇಯರ್ ಅವಧಿಯನ್ನು ವಿಭಜಿಸುವ ಮೂಲಕ, ಶಿವಸೇನೆ ತನ್ನ ನಾಲ್ವರು ಕಾರ್ಪೊರೇಟರ್‌ಗಳಿಗೆ ಅವಕಾಶ ನೀಡಲು ಉದ್ದೇಶಿಸಿದೆ.227 ಸದಸ್ಯ ಬಲದ ಬೃಹನುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ನಡೆದ ಚುನಾವಣೆಯಲ್ಲಿ, ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮಿದರೆ, ಶಿವಸೇನೆ 29 ಸ್ಥಾನಗಳನ್ನು ಗೆದ್ದಿದೆ. 118 ಕಾರ್ಪೊರೇಟರ್‌ಗಳ ಸಂಯೋಜಿತ ಬಲವನ್ನು ಹೊಂದಿರುವ ಆಡಳಿತ ಮೈತ್ರಿಕೂಟವು ಬಹುತತಕ್ಕೆ ಅಗತ್ಯವಿರುವ 114ನ್ನು ದಾಟಿದೆ ಮತ್ತು ಮೇಯರ್ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಉತ್ತಮ ಸ್ಥಾನದಲ್ಲಿದೆ. 1997 ರಿಂದ 25 ವರ್ಷಗಳ ಕಾಲ ಪೌರಾಡಳಿತ ಸಂಸ್ಥೆಯನ್ನು ಆಳಿದ ಶಿವಸೇನೆ (ಯುಬಿಟಿ) 65 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರಪಕ್ಷಗಳಾದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 6 ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಒಂದು ಸ್ಥಾನವನ್ನು ಗೆದ್ದಿದೆ. ಉಳಿದಂತೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 24 ಸ್ಥಾನಗಳನ್ನು, ಎಐಎಂಐಎಂ-8, ಎನ್‌ಸಿಪಿ (ಅಜಿತ್ ಪವಾರ್ ಬಣ) 3 ಮತ್ತು ಸಮಾಜವಾದಿ ಪಕ್ಷ ಎರಡು ಸ್ಥಾನಗಳನ್ನು ಗೆದ್ದವು.
ಒಂಬತ್ತು ವರ್ಷಗಳ ಅಂತರದ ನಂತರ ನಡೆದ ಪ್ರತಿಷ್ಠೆ ಪಣತೊಟ್ಟ ಚುನಾವಣೆಯಲ್ಲಿ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸಹ ಗೆದ್ದಿದ್ದಾರೆ.ಬಿಎಂಸಿ ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾಗಿದ್ದು, 2025-26ರ ಬಜೆಟ್ ಅನ್ನು ರೂ. 74,450 ಕೋಟಿ ಎಂದು ನಿಗದಿಪಡಿಸಲಾಗಿದೆ, ಇದು ಕೆಲವು ಸಣ್ಣ ರಾಜ್ಯಗಳಿಗಿಂತ ಹೆಚ್ಚಾಗಿದೆ.