image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್ಐಟಿ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಸುಳ್ಳು ಸುದ್ದಿ ಹಾಗೂ ಅರ್ಧಸತ್ಯಗಳನ್ನು ವ್ಯಾಪಕವಾಗಿ ಹರಡುತ್ತಿರುವುದು ಖಂಡನೀಯ- ಕಿಶೋರ್ ಕುಮಾರ್ ಪುತ್ತೂರು

ಎಸ್ಐಟಿ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಸುಳ್ಳು ಸುದ್ದಿ ಹಾಗೂ ಅರ್ಧಸತ್ಯಗಳನ್ನು ವ್ಯಾಪಕವಾಗಿ ಹರಡುತ್ತಿರುವುದು ಖಂಡನೀಯ- ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು : ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವದಂತಿಗಳನ್ನು ಹರಡುವ ಸಾಮಾಜಿಕ ಮಾಧ್ಯಮ ಹಾಗೂ ಮಾಧ್ಯಮ ಚಟುವಟಿಕೆಗಳ ಬಗ್ಗೆ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಅವರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಕುರಿತು ಇತ್ತೀಚೆಗೆ ಕೆಲವು ಯೂಟ್ಯೂಬ್ ಚಾನೆಲ್‌ಗಳು, ನ್ಯೂಸ್ ಪೋರ್ಟಲ್‌ಗಳು ಮತ್ತು ಸ್ವಯಂ ಘೋಷಿತ "ಸೋಶಿಯಲ್ ಮೀಡಿಯಾ ಹೀರೋಗಳು" ಯಾವುದೇ ದೃಢವಾದ ಆಧಾರವಿಲ್ಲದೆ ಅಪವಾದಾತ್ಮಕ ಮತ್ತು ಅವಹೇಳನಕಾರಿ ವದಂತಿಗಳನ್ನು ನಿರಂತರವಾಗಿ ಹರಡುವುದು ಗಂಭೀರ ಚಿಂತೆಯ ವಿಷಯವಾಗಿದೆ.

ಇತ್ತೀಚೆಗೆ ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂತಿರುವಂತೆ ಆರೋಪ ಮಾಡಲಾದ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐಟಿ ತನಿಖೆ ಪ್ರಾರಂಭಿಸಿರುವುದು ಸ್ವಾಗತಾರ್ಹ. ತನಿಖಾ ತಂಡವು ಕಾನೂನು ಪ್ರಕ್ರಿಯೆ ಪ್ರಕಾರ ತನ್ನ ಕಾರ್ಯವನ್ನು ಮುಂದುವರಿಸುತ್ತಿದ್ದು, ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಪರಿಸ್ಥಿತಿಯಲ್ಲಿ, ಕೆಲವು ಮಾಧ್ಯಮಗಳು ಮತ್ತು ಸಮಾಜವಿರೋಧಿ ಅಂಶಗಳು ಸುಳ್ಳು ಸುದ್ದಿ ಹಾಗೂ ಅರ್ಧಸತ್ಯಗಳನ್ನು ವ್ಯಾಪಕವಾಗಿ ಹರಡುವುದು ಅತ್ಯಂತ ಖಂಡನೀಯ.

ಇದಕ್ಕೆ ಸರ್ಕಾರದ ಕೆಲವೊಂದು ವಲಯಗಳಿಂದ ಪರೋಕ್ಷ ಬೆಂಬಲ ಇರುವುದಾಗಿ ಕಂಡುಬರುತ್ತಿರುವುದು ವಿಷಾದನೀಯ. ಸಾಮಾಜಿಕ ಮಾಧ್ಯಮದ ಅಶಿಷ್ಟ ಬಳಕೆದಾರರಿಂದ ರೂಪುಗೊಂಡಿರುವ "ಫೇಕ್ ನ್ಯೂಸ್ ಫ್ಯಾಕ್ಟರಿ" ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಇದು ಕೇವಲ ಧರ್ಮಸ್ಥಳದ ಹೆಸರಿಗೆ ಅಪಮಾನವಲ್ಲ, ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೂ, ಸಂವಿಧಾನದ ಧರ್ಮನಿರಪೇಕ್ಷತೆಯ ತತ್ವಕ್ಕೂ ಧಕ್ಕೆಯಾಗುವಂತದ್ದು.ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, ತಮಿಳುನಾಡಿನಿಂದ ಕೆಲ ರಾಜಕೀಯ ನಾಯಕರು ಈ ಅಪಪ್ರಚಾರದ ಹಿಂದೆ ಇದ್ದಿರಬಹುದೆಂಬ ಶಂಕೆ ಇದೆ. ರಾಜ್ಯ ಸರ್ಕಾರ ತಕ್ಷಣದಲ್ಲಿ ಸ್ಪಷ್ಟನೆ ನೀಡಬೇಕು ಮತ್ತು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಶ್ರೀ ಕ್ಷೇತ್ರ ಧರ್ಮಸ್ಥಳ ದಶಕಗಳಿಂದ ಅನ್ನದಾನ, ಶಿಕ್ಷಣ, ಆರೋಗ್ಯ, ಗ್ರಾಮಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ದೇವಾಲಯ. ಈ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗುವ ಯಾವುದೇ ರಾಜಕೀಯ ನಡಾವಳಿಗಳನ್ನು ನಾನು ವ್ಯಕ್ತಿಯಾಗಿ ಮತ್ತು ಶಾಸಕರಾಗಿ ತೀವ್ರವಾಗಿ ಖಂಡಿಸುತ್ತೇನೆ.

ಇಂತಹ ದುರಾಸೆಗಳ ಹಿಂದಿರುವವರು ಕ್ರಿಶ್ಚಿಯನ್ ಮಿಷನರಿ ಚಟುವಟಿಕೆಗಳಿಗೂ ಎಡಪಂಥೀಯ ಆಕ್ರಮಣ ಶಕ್ತಿಗಳಿಗೂ ಸಂಬಂಧ ಹೊಂದಿರುವ ಸಾಧ್ಯತೆ ಇದೆ. ನಮ್ಮ ಶ್ರದ್ಧಾಕೇಂದ್ರವಾದ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಈ ಸಂಚುಗಳನ್ನು ತಡೆಯಲು ಹಿಂದೂ ಸಮಾಜದ ಪ್ರತಿಯೊಬ್ಬರೊಬ್ಬರೂ ಎಚ್ಚರಿಕೆಯಿಂದ, ಜಾಗೃತಿಯಿಂದ, ಶಿಸ್ತಿನಿಂದ ಪ್ರತಿಕ್ರಿಯಿಸಬೇಕು.

ಇಡೀ ಭೂಮಂಡಲಕ್ಕೆ ವ್ಯಾಪಿಸಬೇಕಾಗಿದ್ದ ವಿಷವನ್ನು ಸೇವಿಸಿದ್ದು ಮಂಜುನಾಥ. ಮಂಜುನಾಥ ದೇವರಲ್ಲಿ, ಅವರ ರಕ್ಷಕ ಮತ್ತು ಅಷ್ಟೇ ಕಾರ್ಣಿಕ ದೈವವಾದ ಅಣ್ಣಪ್ಪಸ್ವಾಮಿಯಲ್ಲಿ ಪ್ರಾರ್ಥನೆ ಏನೆಂದರೆ ನಿಮ್ಮ ಶ್ರದ್ದಾಬಿಂಧುವಾದ ಕ್ಷೇತ್ರ ಧರ್ಮಸ್ಥಳಕ್ಕೆ ಕೆಟ್ಟ ಹೆಸರನ್ನು ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು ಇದರ ಹಿಂದಿರುವ ಎಲ್ಲರಿಗೆ ದೇವರು ತಕ್ಕ ಶಾಸ್ತಿಯನ್ನು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ  ನ್ಯಾಯ ಸಿಗಲಿ ಸತ್ಯ ಹೊರಬರಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ