image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಜುನಾಥ ಸ್ವಾಮಿಗೆ ಸಮಾವೇಶ ಬೇಕಾಗಿಲ್ಲ: ರಾಜಕೀಯ ಲಾಭಕ್ಕಾಗಿ ಬಿಜೆಪಿ ಹರ ಸಾಹಸ-ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಜುನಾಥ ಸ್ವಾಮಿಗೆ ಸಮಾವೇಶ ಬೇಕಾಗಿಲ್ಲ: ರಾಜಕೀಯ ಲಾಭಕ್ಕಾಗಿ ಬಿಜೆಪಿ ಹರ ಸಾಹಸ-ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ರಕ್ಷಣೆಗೆ ದೊಡ್ಡ ಸಮಾವೇಶ ಅನಗತ್ಯ ಶ್ರೀ ಮಂಜುನಾಥ ಸ್ವಾಮಿಗೆ ಇಂತಹ ಸಮಾವೇಶ ಬೇಕಾಗಿಲ್ಲ. ಶ್ರೀಕ್ಷೇತ್ರದ ರಕ್ಷಣೆಗೆ ಕರ್ನಾಟಕ ಸರಕಾರ ಇದೆ, ನಾವು ಇದ್ದೇವೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಎಂದು ಬಿಜೆಪಿಯನ್ನು ಕುಟುಕಿದ್ದಾರೆ.

ಮಂಗಳೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು  ಆಯೋಜಿಸಿರುವ 'ಧರ್ಮಸ್ಥಳ ಚಲೋ' ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಹರಸಾಹಸ.ಬಿಜೆಪಿಯವರಿಗೆ ರಾಜಕೀಯವಾಗಿ ಲಾಭಮಾಡಿಕೊಳ್ಳಲು ಏನಾದರೂ ವಿವಾದ ಬೇಕು. ಆ ಕಾರಣಕ್ಕಾಗಿ ಧರ್ಮಸ್ಥಳ ವಿಚಾರವನ್ನು ಕೈಗೆತ್ತಿಕೊಂಡು ರಾಜಕೀಯ ಮಾಡುತ್ತಿದೆ . ಇದರಲ್ಲಿ ರಾಜ್ಯದ ಹಿತವೂ ಇಲ್ಲ ಜನತೆಯ ಹಿತವೂ ಇಲ್ಲ. ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಕರ್ನಾಟಕಕ್ಕೆ ಬರಬೇಕಾದ ಅನುದಾನ ತರಿಸಿಕೊಡುವ ಪ್ರಯತ್ನ ಮಾಡಲಿ, ಸ್ವಾರ್ಥ ರಾಜಕಾರಣವನ್ನು ರಾಜ್ಯದ ಜನತೆಯ ಪರವಾಗಿ ಹೋರಾಡಲಿ ಎಂದರು.ಬಿಜೆಪಿ ಕೇವಲ ಧಾರ್ಮಿಕ ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಅದರ ಉದ್ದೇಶ ಏನು ಎಂದು ಎಲ್ಲರಿಗೂ ಗೊತ್ತಾಗಿದೆ ಎಂದರು.

Category
ಕರಾವಳಿ ತರಂಗಿಣಿ