ಧರ್ಮಸ್ಥಳ: "ಧರ್ಮಸ್ಥಳ ಪ್ರಕರಣ" ಯಾವ ಸಿನಿಮಾದ ಚಿತ್ರಕತೆಗಿಂತಲೂ ಕಡಿಮೆಯಿಲ್ಲ. ಈ ಸಿನಿಮಾದ ಮುಂದೆ ಕೆಜಿಎಫ್, ಆರ್.ಆರ್.ಆರ್ ಸಿನಿಮಾಗಲೂ ಏನೂ ಅಲ್ಲ. ಇದರ ನಿರ್ದೇಶಕ ಯಾರೇ ಇರಬಹುದು, ಆದರೆ ನಿರ್ಮಾಪಕ ಮಾತ್ರ ಕಾಂಗ್ರೆಸ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.ಧರ್ಮಸ್ಥಳ ಚಲೋ ಅಭಿಯಾನದ ಅಂಗವಾಗಿ ಧರ್ಮಸ್ಥಳದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್ ಇದೆ. ಇಲ್ಲಿ ತಿಮರೋಡಿ ಗ್ಯಾಂಗ್ ಸೇರಿಕೊಂಡಿದೆ. ಇವರೆಲ್ಲ ನಗರ ನಕ್ಸಲರು. ಇವರೇ ತನಿಖೆಯನ್ನು ಎಸ್ಐಟಿಗೆ ಕೊಡಲು ಒತ್ತಡ ಹೇರಿದವರು ಇವರೆ. ಈ ಷಡ್ಯಂತ್ರ ಬಗ್ಗೆ ಎನ್ಐಎ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಲಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಗ್ಯಾಂಗ್ ಇದನ್ನು ಮುಚ್ಚಿ ಹಾಕಿ ಬಿಡುತ್ತದೆ ಎಂದರು.
ಧರ್ಮಸ್ಥಳದಲ್ಲಿ ಸಾವಿರಾರು ಅತ್ಯಾಚಾರಗಳಾಗಿವೆ. ಸಾವಿರಾರು ಹೆಣಗಳನ್ನು ಹೂತಿದ್ದಾರೆ ಎಂದು ಹುಡುಕಿಸಿದ ಸರ್ಕಾರಕ್ಕೆ ಮಸೀದಿಯಲ್ಲಿ ಮೂಳೆ ಹುಡುಕಲು ಆಗುತ್ತದೆಯೇ ಎಂದು ಆರ್.ಅಶೋಕ್ ಸವಾಲೆಸೆದರು.