image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾಧವಿ ಅಪಘಾತ ಸಾವು, ಹೆದ್ದಾರಿ ಪ್ರಾಧಿಕಾರ ಪ್ರಾಯೋಜಿತ ಕೊಲೆ - ಬಿಕೆ ಇಮ್ತಿಯಾಜ್

ಮಾಧವಿ ಅಪಘಾತ ಸಾವು, ಹೆದ್ದಾರಿ ಪ್ರಾಧಿಕಾರ ಪ್ರಾಯೋಜಿತ ಕೊಲೆ - ಬಿಕೆ ಇಮ್ತಿಯಾಜ್

ಮಂಗಳೂರು: ನಂತೂರಿನಿಂದ ಸುರತ್ಕಲ್ ವರೆಗಿನ ರಾಷ್ಟೀಯ ಹೆದ್ದಾರಿ ವಾಹನ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ ಹೆದ್ದಾರಿ ಪೂರ್ತಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿದೆ  ದ್ವಿಚಕ್ರ ವಾಹನ ಸವಾರರು ದಿನನಿತ್ಯ ಅಪಘಾತಕ್ಕೊಳಗಾಗಿ ಸಾವಿಗೀಡಾಗುತ್ತಿದ್ದಾರೆ ಹೆದ್ದಾರಿ ಪ್ರಾಧಿಕಾರ ಮತ್ತು ನಮ್ಮ ಜನಪ್ರತಿನಿದಿನಗಳು ಗಾಢ ನಿದ್ರೆಯಲ್ಲಿದ್ದಾರೆ ಎಂದು ಡಿವೈಎಫ್ಐ  ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಹೇಳಿದರು ಅವರು ಇಂದು ಕುಳೂರು ಜಂಕ್ಷನ್ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ಗುಂಡಿಯಿಂದಾಗಿ ಅಪಘಾತಾಕ್ಕೊಳಗಾಗಿ ಸಾವನ್ನಪ್ಪಿದ ಮಾಧವಿ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಹೆದ್ದಾರಿ ಗುಂಡಿ ಮುಚ್ಚದೆ ಜನರ ಸಾವು ನೋವಿಗೆ ಕಾರಣರಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.

ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಜಿಲ್ಲೆಯ ಹೆದ್ದಾರಿ ಸಮಸ್ಯೆ ಬಗೆಹರಿಸಿ ಸಾವು ನೋವು  ತಪ್ಪಿಸುವ ಬದಲಿಗೆ ಮತೀಯ ಹೆಣ ರಾಜಕೀಯದ ಗ್ಯಾಂಗ್ ಸೇರಿಕೊಂಡಿರುವುದು ವಿಷಾದನೀಯ ಎಂದು ಹೇಳಿದ ಅವರು ಹೆದ್ದಾರಿ ಗುಂಡಿ ಮುಚ್ಚದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಮಾಧವಿ ಸಾವು ಹೆದ್ದಾರಿ ಪ್ರಾಧಿಕಾರ ಪ್ರಾಯೋಜಿತ ಕೊಲೆ ಎಂದು ಟೀಕಿಸಿದರು

ಪ್ರತಿಭಟನೆ ಉದ್ದೇಶಿಸಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಾಮರಸ್ಯ ಮಂಗಳೂರು ಅಧ್ಯಕ್ಷ ರಾದ ಮಂಜುಳಾ ನಾಯಕ್ ಶ್ರೀನಾಥ್ ಕುಲಾಲ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಹಿಳಾ  ಮುಖಂಡರಾದ ಮೀನಾ ಟೆಲ್ಲಿಸ್,ಸೌಮ್ಯ ಪಂಜಿಮೊಗರು, ಪ್ರಮೀಳಾ, ಯೋಗಿತಾ, ಮಾಧುರಿ, ಆಶಾ ಬೈಕಂಪಾಡಿ, ಸಾಮಾಜಿಕ ಮುಂದಾಳುಗಳಾದ ವಿನ್ಸೆಟ್ ಕೋಡಿಕಲ್, ಕನಕದಾಸ ಕೂಳೂರು, ಮುಸ್ತಫಾ ಪಂಜಿಮೊಗರು,ಮನೋಜ್ ಕುಲಾಲ್, ಸುಜಿತ್, ಶರೀಫ್ ಮಾಯಿಲ, ಅನಿಲ್ ಡಿಸೋಜಾ,ತೋಸೀಫ್ ಅಂಗರಗುಂಡಿ, ಯೋಗೀಶ್ ಜಪ್ಪಿನಮೊಗರು,ಡಿವೈಎಫ್ಐ ಮುಖಂಡರಾದ ಮನೋಜ್ ವಾಮಂಜೂರು, ರಿಜ್ವಾನ್ ಹರೇಕಲ ತಯೂಬ್ ಬೆಂಗ್ರೆ, ನೌಶಾದ್ ಬೆಂಗ್ರೆ, ಹನೀಫ್ ಬೆಂಗ್ರೆ,ನವೀನ್ ಡಿಸೋಜಾ ಖಲೀಲ್ ಪಂಜಿಮೊಗರು,ಬಷೀರ್, ಬಿಕೆ ಮಸೂದ್,ಸಾದಿಕ್ ಮೂಲ್ಕಿ,ಸಂತೋಷ್ ಡಿಸೋಜ, ಲಿಖಿತ್ ವಾಮಂಜೂರು, ಮುಸ್ತಫಾ ಬೈಕಂಪಾಡಿ, ಆಜ್ಮಲ್ ಕಾನ, ಐ ಮೊಹಮ್ಮದ್, ಮುಂತಾದವರು ಉಪಸ್ಥಿತರಿದ್ದರು 

Category
ಕರಾವಳಿ ತರಂಗಿಣಿ