ಮಂಗಳೂರು : ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 'ವೋಟ್ ಚೋರಿ' ಸುಳ್ಳು ಸಹಿ ಸಂಗ್ರಹ ಅಭಿಯಾನದ ಕುರಿತು ಜಿಲ್ಲಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಯು. ನಂದನ್ ಮಲ್ಯ ನೇತ್ರತ್ವದಲ್ಲಿ ದಿನಾಂಕ 12.11.2025 ರಂದು ದೂರು ನೀಡಲಾಯಿತು. ಕಾಂಗ್ರೇಸ್ ಕಾರ್ಯಕರ್ತರು ಕಾಲೇಜು ಆವರಣದಲ್ಲಿ ಭಾರತ ಚುನಾವಣಾ ಆಯೋಗದ (ECI) ವಿರುದ್ಧ ಸುಳ್ಳು ಪ್ರಚಾರ ನಡೆಸಿದ್ದಾರೆ ಹಾಗೂ ಕಾಲೇಜು ಮಾಲಕರಾದ ಕಾಂಗ್ರೇಸ್‌ನ ಹಾಲಿ ಎಂ.ಎಲ್.ಸಿ. (MLC) ಮಂಜುನಾಥ ಭಂಡಾರಿ ಯವರ ಪ್ರಭಾವದಿಂದ ವಿದ್ಯಾರ್ಥಿ ಮೇಲೆ ಸಹಿ ಹಾಕಲು ಒತ್ತಡ ಹೇರಲಾಗಿದೆ ಎಂದು ದೂರು ನೀಡಲಾಯಿತು. ಬಿಜೆಪಿ ಯುವ ಮೋರ್ಚಾವು ಈ ಸಾಂವಿಧಾನಿಕ ಸಂಸ್ಥೆಯ ವಿರುದ್ಧದ ಅಪಮಾನಕರ ಪ್ರಚಾರ ಹಾಗೂ ಶಿಕ್ಷಣ ಸಂಸ್ಥೆಯ ದುರ್ಬಳಕೆಯ ಬಗ್ಗೆ ತನಿಖೆ ಮತ್ತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಜಯಂತ್ ಸಾಲ್ಯಾನ್, ದಿನೇಶ್ ಅಮ್ಮೂರು, ನಂದನ್ ಮಲ್ಯ, ಭರತ್ ರಾಜ್ ಕೃಷ್ಣಾಪುರ, ಅಶ್ರಿತ್ ನೊಂಡ, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಪ್ರಕಾಶ್ ಕೌಶಿಕ್ ಗರೋಡಿ, ವರುಣ್ ರಾಜ್ ಅಂಬಟ್ ರಕ್ಷಿತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.