ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಸಂಸತ್ ಭವನದ ಸಭಾಂಗಣದಲ್ಲಿ ಕರ್ನಾಟಕದ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಸುಮಾರು 45 ನಿಮಿಷಗಳ ಕಾಲ ವಿಶೇಷ ಸಭೆ ನಡೆಸಿ, ಪಕ್ಷದ ಸಂಘಟನೆ, ಸಾರ್ವಜನಿಕ ಸಂಪರ್ಕ, ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಕ್ಷೇತ್ರದ ಕಾರ್ಯಶೀಲತೆ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ. ಈ ಮೂಲಕ ಕರ್ನಾಟಕ ಬಿಜೆಪಿ ನಾಯಕರ ಬಗ್ಗೆ ಮೋದಿ ಪರೋಕ್ಷ ಬೇಸರಗೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಸಂಸದರ ಸಭೆಯಲ್ಲಿ ಪರೋಕ್ಷವಾಗಿ ರಾಜ್ಯದ ಸಂಸದರನ್ನೇ ಪ್ರಧಾನಿ ಮೋಡಿ ಟಾರ್ಗೆಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ರಾಜಕೀಯವಾಗಿ ಎನ್‌ಕ್ಯಾಶ್ ಮಾಡದಿರುವ ಬಗ್ಗೆ ಪರೋಕ್ಷ ಬೇಸರ ವ್ಯಕ್ತಪಡಿಸಿದರು. ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿ, ಸರ್ಕಾರದ ವೈಫಲ್ಯಗಳು ಮತ್ತು ವಿರೋಧ ಪಕ್ಷದ ಪಾತ್ರಗಳ ಕುರಿತು ಮೋದಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದಂತಾಯಿತು.
ಸಭೆಯ ಆರಂಭದಲ್ಲೇ ಮೋದಿ, "ಪ್ರಧಾನಮಂತ್ರಿ ಮ್ಯೂಸಿಯಂ ನೋಡಿದ್ದೀರಾ? ನಿಮ್ಮ ಕುಟುಂಬಕ್ಕೂ ತೋರಿಸಿದ್ದೀರಾ?" ಎಂದು ಕೇಳಿ, ಸಂಸದರು ರಾಷ್ಟ್ರದ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಸಂದೇಶ ನೀಡಿದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯತೆಯ ಕೊರತೆಯ ಕಡೆಗೆ ಮೋದಿ ಪ್ರಶ್ನೆ ಮಾಡಿದರು. ಮೋದಿಯವರು ಸಂಸದರ ಡಿಜಿಟಲ್ ಹಾಜರಾತಿಯ ಕೊರತೆಯನ್ನು ಉಲ್ಲೇಖಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದೀರಾ? ಯಾರು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಸಂಸದರ ಫಾಲೋವರ್ಸ್ ಎಷ್ಟು? ನೀವು ಯಾವ ವಿಷಯಗಳನ್ನು ಪೋಸ್ಟ್ ಮಾಡಿದ್ದೀರಿ? ಮೋದಿಯವರು ನೇರವಾಗಿ ಫಾಲೋವರ್ಸ್ ಮತ್ತು ಪೋಸ್ಟಿಂಗ್ ಕುರಿತು ತಿಳಿದಿರುವುದಾಗಿ ಹೇಳಿದುದು ಸಂಸದರ ನಡುವೆ ಗಂಭೀರ ಚರ್ಚೆಗೆ ಕಾರಣವಾಯಿತು.
ಕೇಂದ್ರದ ಯೋಜನೆಗಳನ್ನು ನಿಮ್ಮ ನಿಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಿ? ನಿಮ್ಮ ಕುಟುಂಬಕ್ಕೆ ಸಮಯ ಕೊಡ್ತಾ ಇದ್ದೀರಾ? ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಸಂಸದರಿಗೆ ಕೇಳಿದ ಪ್ರಶ್ನೆಗಳು ಇವು, ಕರ್ನಾಟಕ ಸಂಸದರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಮೋದಿ ಚರ್ಚಿಸಿದರು. ಸಂಸತ್ ಭವನದ ಹಾಲ್ ನಲ್ಲಿ ಕರ್ನಾಟಕ ಸಂಸದರಿಗೆ ಕ್ಲಾಸ್ ತೆಗೆದುಕೊಂಡು ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ನಾಯಕತ್ವದ ಪಾಠ ಮಾಡಿದರು. ಈ ಮೂಲಕ ಕಾರ್ಯಕರ್ತರ ಜೊತೆ ಸಂಪರ್ಕ ಕುರಿತು ಪದೇ ಪದೇ ಒತ್ತಿ ಹೇಳಿದರು. ಸಂಸದರ ಕ್ಷೇತ್ರ ಕಾರ್ಯದಲ್ಲಿ ಖುದ್ದಾಗಿ ಇದ್ದು ಕೆಲಸ ಮಾಡಬೇಕೆಂದು ಒತ್ತಿ ಹೇಳಿದರು. ಜನರಿಗೆ ನೀವು ನಾಟಕ ಮಾಡುತ್ತಿದ್ದೀರಿ ಎನಿಸಿಬಾರದು. ನಿಮ್ಮ ಕ್ಷೇತ್ರದಲ್ಲಿ ಒಬ್ಬ 70 ವರ್ಷದ ವೃದ್ದನಿಗೆ ಆಗಬೇಕಾದ ಕೆಲಸ ನೀವೆ ಹೋಗಿ ಮಾಡಿಕೊಡಿ. ಚುನಾವಣೆಯಲ್ಲಿ ಅದೇ ವ್ಯಕ್ತಿ ನಿಮ್ಮ ಪರ ಪ್ರಚಾರ ಮಾಡುತ್ತಾನೆ ಎಂದರು.