image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಿವಕುಮಾರ್‌ರಂಥ ನಾಯಕರಿಗೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ವಹಿಸಿ ನಾಯಕತ್ವ ನೀಡಬೇಕು : ಒಡಿಶಾದ ಮಾಜಿ ಕಾಂಗ್ರೆಸ್‌ ಶಾಸಕ

ಶಿವಕುಮಾರ್‌ರಂಥ ನಾಯಕರಿಗೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ವಹಿಸಿ ನಾಯಕತ್ವ ನೀಡಬೇಕು : ಒಡಿಶಾದ ಮಾಜಿ ಕಾಂಗ್ರೆಸ್‌ ಶಾಸಕ

ನವದೆಹಲಿ: ಕಾಂಗ್ರೆಸ್‌ ಪಕ್ಷ ವಿವಿಧ ಚುನಾವಣೆಯಲ್ಲಿ ಸಾಲು ಸಾಲು ಸೋಲು ಅನುಭವಿಸುತ್ತಿರುವ ಕಾರಣ ರಾಷ್ಟ್ರೀಯ ನಾಯಕತ್ವದಲ್ಲೇ ಬದಲಾವಣೆ ಆಗಬೇಕು ಎಂಬ ಕೂಗು ಎದ್ದಿದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರಂಥ ನಾಯಕರಿಗೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ವಹಿಸಿ ನಾಯಕತ್ವ ನೀಡಬೇಕು ಎಂದು ಒಡಿಶಾದ ಮಾಜಿ ಕಾಂಗ್ರೆಸ್‌ ಶಾಸಕ ಮೊಹಮ್ಮದ್ ಮೊಕಿಮ್ ಆಗ್ರಹಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಪತ್ರ ಮುಖೇನ ಮನವಿ ಮಾಡಿರುವ ಅವರು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವಕ್ಕೆ ಆಕ್ಷೇಪಿಸಿದ್ದಾರೆ. ಕರ್ನಾಟಕದಲ್ಲಿ ಡಿಕೆಶಿ ಸಿಎಂ ಆಗಬೇಕು ಎಂಬ ಕೂಗು ಎದ್ದಿರುವ ನಡುವೆಯೇ ರಾಷ್ಟ್ರೀಯ ನಾಯಕತ್ವಕ್ಕೂ ಅವರ ಹೆಸರು ಕೇಳಿಬಂದಿರುವುದು ಗಮನಾರ್ಹವಾಗಿದ್ದು, ಸಂಚಲನ ಮೂಡಿಸಿದೆ.

'ಕಾಂಗ್ರೆಸ್‌ ಪಕ್ಷಕ್ಕೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯ. ನಾನು ಕಳೆದ 3 ವರ್ಷಗಳಿಂದ ರಾಹುಲ್‌ ಗಾಂಧಿಯವರ ಭೇಟಿಗೆ ಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ನಾಯಕತ್ವದಲ್ಲಿ ಸಂಪೂರ್ಣ ಬದಲಾವಣೆ ಮಾಡದಿದ್ದರೆ ಶತಮಾನದ ಇತಿಹಾಸವುಳ್ಳ ಪಕ್ಷವನ್ನು ಕಳೆದುಕೊಳ್ಳಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತೂ ಆಕ್ಷೇಪಿಸಿರುವ ಮೊಕೀಮ್‌, 'ಖರ್ಗೆಯವರಿಗೆ 83 ವರ್ಷ ವಯಸ್ಸು. ಶೇ.65ರಷ್ಟು ಪ್ರಮಾಣದಲ್ಲಿರುವ 35 ವರ್ಷಕ್ಕಿಂತ ಕೆಳಗಿನ ಭಾರತದ ಯುವಕರ ಪ್ರತಿಧ್ವನಿ ಆಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಬದಲಿಗೆ ಯುವನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು' ಎಂದು ಆಗ್ರಹಿಸಿದ್ದಾರೆ. 'ಕಾಂಗ್ರೆಸ್‌ನಲ್ಲಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ನಾಯಕರಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕೇಂದ್ರದಲ್ಲಿ ಸಕ್ರಿಯ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಕೂಗು. ಜತೆಗೆ ರಾಜಸ್ಥಾನದ ಸಚಿನ್ ಪೈಲಟ್, ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಮತ್ತು ಸಂಸದ ಶಶಿ ತರೂರ್ ಅವರಿಗೂ ಪ್ರಮುಖ ನಾಯಕತ್ವ ವಹಿಸಬೇಕು. ಅವರಿಗೆ ಆ ಸಾಮರ್ಥ್ಯವಿದೆ' ಎಂದಿದ್ದಾರೆ. 

Category
ಕರಾವಳಿ ತರಂಗಿಣಿ