ನವದೆಹಲಿ : ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕಮಾಂಡ್ ಅವರನ್ನು ಭೇಟಿಯಾದ ಬಳಿಕ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ರೀತಿಯ ಸಚಿವ ಸಂಪುಟ ಪುನಾರಚನೆಯು ಇಲ್ಲ, ಯಾವುದೇ ನಾಯಕತ್ವದ ಬದಲಾವಣೆಯು ಇಲ್ಲ ಎಂದು ಸ್ಪಷ್ಟಪಡಿಸಿದರು. ಸಿಎಂ ಹುದ್ದೆ ಖಾಲಿ ಇಲ್ಲ ಅಂತ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ ಹಾಗಾಗಿ ಸದ್ಯಕ್ಕೆ ಸಚಿವ ಸಂಪುಟ ಪುನಃ ರಚನೆಯನ್ನು ಇಲ್ಲ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯು ಆಗಿಲ್ಲ. ನಾಯಕತ್ವ ಬದಲಾವಣೆ ಎಂದು ಯಾರೂ ಹೇಳಿದ್ದು ವೈಯಕ್ತಿಕ ಅಭಿಪ್ರಾಯವಲ್ಲ ಪಕ್ಷದ ತೀರ್ಮಾನ ಆಗುತ್ತಾ ಎಂದು ತಿಳಿಸಿದರು ಕ್ರಾಂತಿ ಅಂದರೆ ಬದಲಾವಣೆನಾ ಎಂದು ಸಿಎಂ ಸಿದ್ದರಾಮಯ್ಯ ಇದೇ ಬಳಿ ಪ್ರಶ್ನಿಸಿದರು ಬದಲಾವಣೆಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಕೆಸಿ ವೇಣುಗೋಪಾಲ್ ಹೇಳಬೇಕು.
2023ರ ಚುನಾವಣೆ ವೇಳೆ ಏನು ಆಯಿತು? 2028 ರಲ್ಲೂ ಕೂಡ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿಕೆ ಶಿವಕುಮಾರ್ ಬದ್ಧರಾಗಿದ್ದೇವೆ. ನನ್ನ ಆಗಲಿ ಡಿಕೆ ಶಿವಕುಮಾರ್ ಅವರನ್ನು ಆಗಲಿ ರಾಹುಲ್ ಗಾಂಧಿ ಭೇಟಿಗೆ ಕರೆದಿಲ್ಲ. ರಾಹುಲ್ ಗಾಂಧಿ ಇದ್ದರೆ ನಾನು ಭೇಟಿ ಮಾಡುತ್ತೇನೆ ಎಂದು ಕೇಳಿದ್ದೇನೆ. ಸಮಯ ಕೊಟ್ಟರೆ ಭೇಟಿ ಮಾಡುತ್ತೇನೆ ಆದರೆ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಇಲ್ಲ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.