image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೆಆರ್​​ಎಸ್​ಗೆ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಅಂತ ಹೆಸರಿಡಲು ಹುನ್ನಾರ : ಆರ್. ಅಶೋಕ್

ಕೆಆರ್​​ಎಸ್​ಗೆ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಅಂತ ಹೆಸರಿಡಲು ಹುನ್ನಾರ : ಆರ್. ಅಶೋಕ್

ಮಂಡ್ಯ: "ಟಿಪ್ಪು ಹಿಂದೆ ಹೋದವರೆಲ್ಲ ಸರ್ವನಾಶವಾಗಿದ್ದಾರೆ. ಹಾಗೆ ಕಾಂಗ್ರೆಸ್​ನವರು ಸರ್ವನಾಶವಾಗುತ್ತಾರೆ. ಕಾಂಗ್ರೆಸ್​​ನವರ ಮನೆ ಮಕ್ಕಳು, ಮೊಮ್ಮಕ್ಕಳು, ಪಕ್ಷಕ್ಕೆ ಟಿಪ್ಪು ಅಂತ ಹೆಸರು ಇಟ್ಟುಕೊಳ್ಳಲಿ" ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೆಆರ್​​ಎಸ್​ಗೆ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಅಂತ ಹೆಸರಿಡಲು ಹುನ್ನಾರ ನಡೆಸಿದೆ. ಇದಕ್ಕೆ ಸಚಿವ ಹೆಚ್​ಸಿ ಮಹದೇವಪ್ಪ ಪೀಠಿಕೆ ಹಾಕಿದ್ದಾರೆ. ಕಾಂಗ್ರೆಸ್​ನವರಿಗೆ ಟಿಪ್ಪು ಅಂದ್ರೆ ಪ್ರೀತಿ ಪ್ರೇಮ. ಟಿಪ್ಪು ಸುಲ್ತಾನ್ ಕಾಂಗ್ರೆಸ್ ಅಂತ ಹೆಸರು ಇಟ್ಟುಕೊಳ್ಳಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಪದೇ ಪದೆ ತರ್ತಿದ್ದಾರೆ. ಇದರ ಹಿಂದೆ ಯಾರ ಕೈವಾಡವಿದೆ" ಎಂದು ಪ್ರಶ್ನಿಸಿದರು. "ಟಿಪ್ಪು ಕನ್ನಡದವನಲ್ಲ. ಟಿಪ್ಪು 1799 ಇಸವಿಯಲ್ಲೇ ಸತ್ತಿದ್ದು. 1911ರಲ್ಲಿ ಕೆಆರ್​ಎಸ್​ ಡ್ಯಾಂ ಪ್ರಾರಂಭವಾಗಿದೆ. 112 ವರ್ಷದ ಕಲ್ಲು ಎಲ್ಲಿತ್ತು, ಎಲ್ಲಿ ಕಾಣೆಯಾಗಿತ್ತು? ಇದು ಸಂಶಯಕ್ಕೆ ಕಾರಣವಾಗಿದೆ‌. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 2 ಕೋಟಿ 35 ಲಕ್ಷ ವೆಚ್ಚದಲ್ಲಿ 124 ಅಡಿ ಎತ್ತರದ ಅಣೆಕಟ್ಟು ಕಟ್ಟಿಸಿದರು. ಒಡವೆಗಳನ್ನು ಬಾಂಬೆಯಲ್ಲಿ ಮಾರಾಟ ಮಾಡಿ ಆ ಹಣದಲ್ಲಿ ಅಣೆಕಟ್ಟು ಕಟ್ಟಿಸಿದ್ದು ಇಂದು ಇತಿಹಾಸ" ಎಂದು ಹೇಳಿದರು.

"ಪದೇ ಪದೆ ನಾಲ್ವಡಿ ಕೃಷ್ಣರಾಜ ಒಡೆಯರ್​ಗೆ ಅಪಮಾನವಾಗುತ್ತಿದೆ. ರಾಜಮನೆತನ ಅಭಿವೃದ್ಧಿ ಪಥವಾಗಿತ್ತು. ಹಳೆ ಮೈಸೂರು ಅಭಿವೃದ್ಧಿ ಆಗಿದ್ರೆ ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಕಾರಣ. ಉತ್ತರ ಕರ್ನಾಟಕದಲ್ಲಿ ಮುಸ್ಲಿಮರ ಆಡಳಿತ ಇತ್ತು, ಅಭಿವೃದ್ಧಿ ಆಗಿಲ್ಲ" ಎಂದರು. "ಬೆಂಗಳೂರು ಕಡೆ ಬಂದು ನಾಡಪ್ರಭು ಕೆಂಪೇಗೌಡರ ಹೆಸರು ತೆಗೆದು ಟಿಪ್ಪು ಹೆಸರು ಬದಲಾವಣೆ ಯಾವಾಗ? ವಿಶ್ವೇಶ್ವರಯ್ಯ ಅವರು ಎಷ್ಟೋ ಡ್ಯಾಂ ಕಟ್ಟಿದ್ದಾರೆ, ಅದಕ್ಕೆ ದಾಖಲೆ ಇದೆ. ದಾಖಲೆ ಇದ್ದರೂ ಕೆಆರ್​ಎಸ್​ಗೆ ಟಿಪ್ಪು ಸಾಗರ ಮಾಡಲು ಹೊರಟಿರುವುದು ಸರಿಯಾ?, ಸಿದ್ದರಾಮಯ್ಯ ಸಾಲ ಮಾಡಿ ನಮ್ಮ ಕೈಗೆ ಚಿಪ್ಪು ಕೊಟ್ಟಿದ್ದಾರೆ. ಕಾಂಗ್ರೆಸ್ ಗೌರವ ಉಳಿಯಬೇಕಾದ್ರೆ ಕೂಡಲೇ ರಾಜ್ಯದ ಜನತೆ, ನಾಲ್ವಡಿ ಕುಟುಂಬಕ್ಕೆ ಕ್ಷಮಾಪಣೆ ಕೇಳಿ. ಹೀಗೆ ಮಾತನಾಡಿದ್ರೆ ಜನರು ನಿಮ್ಮ ಪಕ್ಷವನ್ನು ಧೂಳಿಪಟ ಮಾಡ್ತಾರೆ. ತಕ್ಷಣವೇ ರಾಜಮನೆತನಕ್ಕೆ ಕ್ಷಮೆ ಕೇಳಿ ಗೌರವ ಉಳಿಸಿಕೊಳ್ಳಿ" ಎಂದರು.

"ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ರಾಜಮನೆತನದ ಆಸ್ತಿ ನಮ್ಮದು ಅಂದ್ರು. ಈ ಪ್ರಕರಣ ಕೋರ್ಟ್​ನಲ್ಲಿದೆ. ಸಿದ್ದರಾಮಯ್ಯ ಅಪೀಲ್ ಮೇಲೆ ಅಪೀಲ್ ಹಾಕಿದ್ರು. ಇದಕ್ಕೆ ಕೋರ್ಟ್ ಉತ್ತರ ಕೊಟ್ಟಿದೆ. ಕಾಂಗ್ರೆಸ್​​ನವರು ಟಿಪ್ಪು ಸುಲ್ತಾನ್​ನನ್ನು ಅಟ್ಟಕ್ಕೇರಿಸಿದ್ದಾರೆ. ಟಿಪ್ಪು ಬಗ್ಗೆ ಯಾಕೆ ಚರ್ಚೆ ಮಾಡ್ತಾರೆ. ಶಿಲಾಫಲಕದ ಬಗ್ಗೆ ಪರಮಾರ್ಶೆ ಆಗಬೇಕು. ಮಹದೇವಪ್ಪ ಅವರಿಗೆ ಅವಶ್ಯಕತೆ ಇತ್ತಾ?, ಮಂಡ್ಯ ಶಾಸಕರು ಏನು ಹೇಳ್ತಾರೆ?, ಕಡ್ಡಿತುಂಡಾದ ರೀತಿ ಮಾತನಾಡಬೇಕು" ಎಂದು ಆರ್​ ಅಶೋಕ್​ ಆಗ್ರಹಿಸಿದರು.

Category
ಕರಾವಳಿ ತರಂಗಿಣಿ