image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸುಮ್ಮನೆ ಹಠ ಹಿಡಿಯ ಬೇಡಿ ಕಾನೂನಿಗೆ ಗೌರವ ಕೊಡಿ : ಡಿ.ಕೆ. ಶಿವಕುಮಾರ್

ಸುಮ್ಮನೆ ಹಠ ಹಿಡಿಯ ಬೇಡಿ ಕಾನೂನಿಗೆ ಗೌರವ ಕೊಡಿ : ಡಿ.ಕೆ. ಶಿವಕುಮಾರ್

ಬೆಂಗಳೂರು: ಸುಮ್ಮನೆ ಹಠ ಹಿಡಿಯೋದು ಬೇಡ. ಕಾನೂನಿಗೆ ಗೌರವ ಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಸ್ತೆ ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಾರಿಗೆ ನೌಕರರ ಬೇಡಿಕೆಯನ್ನು ತಪ್ಪು ಅಂತ ಹೇಳಲ್ಲ. ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು. ಸಿಎಂ, ಸಾರಿಗೆ ಸಚಿವರು ಸಹಾಯ ಮಾಡಬೇಕೆಂದಿದ್ದಾರೆ. ನಾಗರಿಕರನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು. ಮಾಡಲು ಆಗದೆ ಇರೋದು ಕಷ್ಟ. ಅದನ್ನು ಮಾಡಿ ಎನ್ನುವುದು ಸರಿಯಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ. ನಾಗರಿಕರಿಗೆ ನಾವು ಪ್ರಾಮುಖ್ಯತೆ ಕೊಡಬೇಕು. ಕೆಲ ಚಾಲಕರು, ಕಂಡಕ್ಟರ್ ಇವತ್ತು ಡ್ಯೂಟಿಗೆ ಬಂದಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತೇನೆ. ಸಾರ್ವಜನಿಕರ ಬದುಕು ಬಹಳ ಮುಖ್ಯ. ನೀವು ಹಠ ಮಾಡೋದು ಸರಿಯಲ್ಲ. ನಿಮ್ಮ ಬೇಡಿಕೆ ಈಡೇರಿಸಲು ಅವಕಾಶ ಇದ್ರೆ ಸಿಎಂ ಮಾಡ್ತಾರೆ. ನೀವು ಸಮಾಜ ಸೇವೆಗೆ ಬಂದವರು, ದಯಮಾಡಿ ಸಹಕಾರ ಕೊಡಬೇಕು ಎಂದು ಡಿಸಿಎಂ ವಿನಂತಿಸಿದರು.

ಮೆಟ್ರೋ‌ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿ, ಆ.10 ರಂದು ಪ್ರಧಾನಿ ಬರುವುದಾಗಿ ಹೇಳಿದ್ದಾರೆ. ರೈಲ್ವೆ ಕಾರ್ಯಕ್ರಮ ಇದೆ. ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಯೂ ಇದೆ. ನಾವು ಕಾರ್ಯಕ್ರಮದಲ್ಲಿ ಭಾಗಿಯಾಗ್ತೇವೆ. ಬೇರೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇಲ್ಲ. ಇನ್ನೂ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಅವರು ಬರುತ್ತೇವೆ ಅಂತ ಹೇಳಿದ್ದಾರೆ. ಟೈಮ್ ಟು ಟೈಮ್ ಪ್ರೋಗ್ರಾಮ್ ಬಗ್ಗೆ ತಿಳಿಸಿಲ್ಲ ಎಂದರು. ಸದಾಶಿವನಗರ ನಿವಾಸದ ಬಳಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಪ್ರತಿಕ್ರಿಯಿಸಿ, ಇಲ್ಲಿವರೆಗೆ ಯಾವುದೇ ದೊಡ್ಡ ಅಹಿತಕರ ಘಟನೆ ನಡೆದಿಲ್ಲ. ಸಣ್ಣಪುಟ್ಟ ಗಲಾಟೆ ನಡೆದರೆ ಕ್ರಮ ವಹಿಸಲಾಗುತ್ತದೆ. ಎಲ್ಲಾ ಕಡೆ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಸಂಪೂರ್ಣ ಬಂದ್ ಮಾಡಿದ್ರೆ ತೊಂದರೆ ಆಗುತ್ತಿತ್ತು. ಆದರೆ ಕೆಲವು ಕಡೆ ಬಸ್‌ಗಳು ಓಡಾಡ್ತಿವೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.

Category
ಕರಾವಳಿ ತರಂಗಿಣಿ