ಬೆಂಗಳೂರು : ಕೇಂದ್ರ ಸರ್ಕಾರ ಗೊಬ್ಬರ ಪೂರೈಕೆ ಮಾಡೋವರೆಗೂ ಸಮಸ್ಯೆ ಇರುತ್ತದೆ. ಏನು ಮಾಡಬೇಕು ಅಂತ ನನಗೂ ಕನ್ಫ್ಯೂಸ್ ಆಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂದುವರೆದ ರಸಗೊಬ್ಬರ ಅಭಾವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದೂವರೆ ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಮಾಡಬೇಕು. ಏನು ಮಾಡಬೇಕು ಅಂತ ನನಗೂ ಗೊಂದಲ ಆಗಿದೆ. ನನ್ನ ರಾಜೀನಾಮೆ ಯಾಕ್ರೀ ಕೇಳ್ತಾರೆ?. ಗೊಬ್ಬರ ಕೊಡದಿರುವ ನಡ್ಡಾ ರಾಜೀನಾಮೆ ಕೊಡಿಸ್ತಾರಾ ಎಂದು ಪ್ರಶ್ನಿಸಿದ್ದಾರೆ.
ವಿಪಕ್ಷ ನಾಯಕ ಅಶೋಕ್‌ಗೆ ಆ ತಾಕತ್ತು ಇದ್ಯಾ?. ಇಷ್ಟೆಲ್ಲಾ ಸಮಸ್ಯೆ ಇದ್ರೂ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ತಿದ್ದೇನೆ. ಒಂದೂವರೆ ಲಕ್ಷ ಮೆಟ್ರಿಕ್ ಟನ್ ಬರಬೇಕಲ್ವ, ಯಾರ ಜವಾಬ್ದಾರಿ ಇದು. ನಡ್ಡಾಗೆ ರಾಜ್ಯದ ಸಮಸ್ಯೆ ಬಗೆಹರಿಸಲು ಸಮಯಾವಕಾಶ ಕೇಳಿದ್ದೆ. ಆದರೆ ಮೊನ್ನೆ ರಾಜ್ಯಕ್ಕೆ ಬಂದರೂ ಅವಕಾಶ ಕೊಟ್ಟಿಲ್ಲ. ಖಾಸಗಿ ಕಾರ್ಯಕ್ರಮವಾದರೂ ಎರಡು ನಿಮಿಷ ಟೈಂ ಕೊಡಬಹುದಿತ್ತಲ್ವ. ಏರ್‌ಪೋರ್ಟ್‌ನಲ್ಲಾದರೂ ಟೈಂ ಕೊಡಬಹುದಿತ್ತಲ್ವ ಎಂದರು. ದೆಹಲಿಯಲ್ಲಿ ಅಧಿಕೃತ ಭೇಟಿಗೂ ಅವಕಾಶ ಕೊಡ್ತಿಲ್ಲ. ನಾವು ಮೋದಿಯವರ ಬಳಿ ಫರ್ಟಿಲೈಸರ್ ಕೇಳುವುದು ಸೂಕ್ತವಲ್ಲ. ಬಿಜೆಪಿಯವರೇ ಗೊಬ್ಬರ ಕೊಡಿ ಅಂತ ನಡ್ಡಾಗೆ ಕೇಳಲಿ. ಅಶೋಕ್‌ಗೆ ಕಾಮನ್ ಸೆನ್ಸ್ ಇಟ್ಕೊಂಡು ಮಾತನಾಡಲು ಹೇಳಿ ಎಂದು ವಾಗ್ದಾಳಿ ನಡೆಸಿದರು.