ಶಿವಮೊಗ್ಗ : ರಾಜ್ಯದಲ್ಲಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತರ ಮಿತಿಮೀರಿ ಹೋಗಿದ್ದು ಹಿಂದೂಗಳ ಭಾವನೆ ಮತ್ತು ನಂಬಿಕೆ ವಿಶ್ವಾಸಕ್ಕೆ ದಕ್ಕೆ ತರುವಂತ ಕೆಲಸಗಳು ಯಾವುದೇ ಭಯವಿಲ್ಲದೆ ನಡೆಯುತ್ತಿದೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಧರ್ಮ ಕ್ಷೇತ್ರವಾದ ಧರ್ಮಸ್ಥಳ ಮೇಲೆ ಅಪಪ್ರಚಾರ ಮಾಡಲು ದೊಡ್ಡ ತಂಡವೇ ಹುಟ್ಟಿಕೊಂಡಿದ್ದು ಅದರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಇದರ ಪರಿಣಾಮವೇ ಇಂದು ಆ ಗುಂಪಿನ ನಾಯಕ ಮಹೇಶ್ ಶೆಟ್ಟಿ ತಿಮ್ಮರೋಡಿ ರಾಜ್ಯದ ಮುಖ್ಯಮಂತ್ರಿ ಅವರನ್ನು ಕೊಲೆಗಾರ ಎಂದೆಲ್ಲ ಬಹಿರಂಗವಾಗಿ ಟೀಕೆಸುವಷ್ಟು ಮಟ್ಟಕ್ಕೆ ಬೆಳೆದು ನಿಂತಿದ್ದಾನೆ ಹಿಂದೆಯೇ ಇವನನ್ನು ಹತೋಟಿಯಲ್ಲಿ ಇಟ್ಟಿದ್ದರೆ ಇಂದು ರಾಜ್ಯ ಸರ್ಕಾರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಲ್ಪಸಂಖ್ಯಾತರ ಓಲೈಕೆ ಹಾಗೂ ಹಿಂದೂ ಧರ್ಮದ ಬಗ್ಗೆ ಇರುವ ಅಗೌರವ ಮತ್ತು ತಾತ್ಸಾರವೇ ಕಾರಣ ಇದಕ್ಕೆ ಮುಖ್ಯ ಕಾರಣ ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ನಿರ್ದಾಕ್ಷಣ ಕ್ರಮ ಕೈಗೊಂಡು ಮೊದಲು ಈ ಮಹೇಶ್ ತಿಮ್ಮಾರೆಡ್ಡಿ ಬಂದಿಸಬೇಕಾಗಿ ಆಗ್ರಹಿಸುತ್ತೇನೆ. ಗೃಹ ಸಚಿವರು ನೆನ್ನೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಹೇಳಿ ಈಗ ಯು ಟರ್ನ್ ಹೊಡೆದಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ ಈ ತಂಡದ ಹಿಂದೆ ಯಾವುದೋ ದೊಡ್ಡ ಮಟ್ಟದ ವ್ಯಕ್ತಿ ಮತ್ತು ಒತ್ತಡ ಇರುವುದು ಇದರಿಂದ ಸ್ಪಷ್ಟವಾಗುತ್ತದೆ. ಧರ್ಮಸ್ಥಳ ಕೇವಲ ಕರ್ನಾಟಕಕ್ಕೆ ಸೀಮಿತ ವಾಗದೆ ದೇಶದ ಎಲ್ಲಾ ರಾಜ್ಯದಿಂದಲೂ ಭಕ್ತರನ್ನು ಹೊಂದಿರುವ ಹಿಂದೂ ಕ್ಷೇತ್ರವಾಗಿದೆ ಆದಿದ್ದರಿಂದ ದೇಶದ ಹೆಮ್ಮೆಯ ಪ್ರಧಾನಿಗಳು ಈ ವಿಷಯವನ್ನು ಸೂಕ್ಷ್ಮವಾಗಿ ಗಮನಹರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ಈ ಕ್ಷೇತ್ರದ ವಿರುದ್ಧ ಆಗುತ್ತಿರುವ ಅಪಪ್ರಚಾರವನ್ನು ತಡೆಗಟ್ಟಬೇಕು ಹಾಗೂ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಈ. ವಿಶ್ವಾಸ್ಮಾಜಿ ಮಹಾನಗರ ಪಾಲಿಕೆ ಸದಸ್ಯರು ಶಿವಮೊಗ್ಗ ಹೇಳಿದ್ದಾರೆ.