image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಲೀಗಲ್ ನೋಟಿಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಲೀಗಲ್ ನೋಟಿಸ್

ಹುಬ್ಬಳ್ಳಿ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಲೀಗಲ್ ನೋಟಿಸ್ ಜಾರಿಮಾಡಲಾಗಿದೆ. 'ಭಾನು ಮುಸ್ತಾಕ್ ಅವರು ಭುವನೇಶ್ವರಿ ದೇವಿ ಹಾಗೂ ಕನ್ನಡ ಬಾವುಟದಲ್ಲಿನ ಕೆಂಪು- ಹಳದಿ ಕುರಿತು ಹಾಸ್ಯ ಮಾಡಿದ್ದು, ಮೂರ್ತಿ ಪೂಜೆ ವಿರೋಧಿಸುವುದಾಗಿ ಹೇಳಿದ್ದು, ಅದು ಹಿಂದೂಗಳ ಭಾವನೆಗೆ ಅವಮಾನ ಉಂಟುಮಾಡಿದೆ. ಹೀಗಾಗಿ ಅವರಿಗೆ ನೀಡಿದ ಆಹ್ವಾನವನ್ನು ಹಿಂಪಡೆಯಬೇಕು' ಎಂದು ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 'ಏಳು ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು' ಎಂದೂ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ