image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯೂಟ್ಯೂಬ್ ಚಾನಲ್​ಗಳ ಹಾವಳಿ ತಡೆಗೆ ಲೈಸೆನ್ಸ್ ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲನೆ : ಸಿ ಎಂ ಸಿದ್ದರಾಮಯ್ಯ

ಯೂಟ್ಯೂಬ್ ಚಾನಲ್​ಗಳ ಹಾವಳಿ ತಡೆಗೆ ಲೈಸೆನ್ಸ್ ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲನೆ : ಸಿ ಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಮೊದಲು ನೀವೆಲ್ಲ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಸಲಹೆ ನೀಡಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಅಸೋಸಿಯೇಷನ್​ ಅನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ರಾಜ್ಯದಲ್ಲಿ ಅನೇಕ ಪತ್ರಕರ್ತರ ಸಂಘಗಳಿವೆ. ಆದರೆ, ಪ್ರತ್ಯೇಕವಾಗಿ ಕಟ್ಟಿಕೊಂಡಿರುವ ಈ ಅಸೋಸಿಯೇಷನ್ ನ್ಯಾಯವನ್ನು ಒದಗಿಸಿಕೊಡುವಲ್ಲಿ ಕೆಲಸ ಮಾಡಲಿ ಎಂದು ಆಶಿಸಿದರು. ಸಮಾಜದಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಆಗಬೇಕೆಂದು ಹೇಳಿರುವ ಡಾ. ಅಂಬೇಡ್ಕರ್ ಅವರ ಮಾತಿನಂತೆ ಹಕ್ಕುಗಳ ರಕ್ಷಣೆ ಆಗಬೇಕಾದರಲ್ಲಿ ಯಾವುದೇ ಜಾತಿ ಆಗಲಿ, ಯಾವುದೇ ವರ್ಗದ ಜನರಾಗಲಿ ಈ ಮೂರು ವಿಧಾನಗಳು ಬಹಳ ಮುಖ್ಯ. ಪತ್ರಕರ್ತರು ಶಿಕ್ಷಕರಿದ್ದಂತೆ. ಎಲ್ಲರೂ ಸೇರಿಕೊಂಡು ಸಂಘಟನೆಯಾಗುತ್ತಿರುವುದು ಖುಷಿ ವಿಚಾರ. ತಮ್ಮ ಹಕ್ಕುಗಳ ಪ್ರತಿಪಾದನೆ ಮಾಡಲು ಇಂತಹ ಸಂಘಟನೆಗಳು ಸಮಾಜದಲ್ಲಿ ಅಗತ್ಯ ಎಂದು ಹೇಳಿದರು.

ಕೆಲವು ಯೂಟ್ಯೂಬ್ ಚಾನಲ್​ಗಳು ಸಮಾಜಕ್ಕೆ ಶಾಪವಾಗಿದ್ದು, ಇಂಥ ಚಾನಲ್​ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸುವಂತೆ ಪತ್ರಕರ್ತರು ತಮ್ಮ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಪತ್ರಕರ್ತರು ಯಾರ ಜೊತೆಗಾದರೂ ಇರಲಿ. ಆದರೆ, ನ್ಯಾಯಬದ್ಧರಾಗಿ ಇರಬೇಕು. ವಸ್ತುಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಸತ್ಯ ಹೇಳುವಂತಹ ಕೆಲಸ ಮಾಡಬೇಕು. ಕಾರಣ ಜನರು ನಿಮ್ಮ ಮೇಲೆ (ಪತ್ರಕರ್ತರು) ಬಹಳಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಆ ಭರವಸೆಗಳು ಯಾವುದೇ ಕಾರಣಕ್ಕೂ ಸುಳ್ಳಾಗದಂತೆ ನೋಡಿಕೊಳ್ಳಬೇಕು. ಇದೊಂದು ಜವಾಬ್ದಾರಿ ಹಾಗೂ ಸವಾಲಿನ ಕೆಲಸವಾಗಿದೆ. ದಿನದ 24 ಗಂಟೆಗಳ ಕಾಲ ಮಳೆ, ಗಾಳಿ ಬಿಸಿಲನ್ನು ಲೆಕ್ಕಿಸದೇ ಹಾಗೂ ಜೀವಕ್ಕೆ ಅಪಾಯ ತಂದೊಡ್ಡುವ ಸಂದರ್ಭದಲ್ಲೂ ಕೆಲಸ ಮಾಡಬೇಕಾದ ಸಂದರ್ಭಗಳು ಬರುತ್ತವೆ. ಆದರೆ, ಇದರ ನಡುವೆ ಸತ್ಯ ಹೇಳುವಂತಹ ಕೆಲಸ ಮಾಡಬೇಕು. ಯಾರೋ ಹೇಳುತ್ತಾರೆಂದು ವರದಿ ಮಾಡಬೇಡಿ, ಅದನ್ನು ಪರಾಮರ್ಶಿಸಿ ವರದಿ ಮಾಡುವಂತೆ ಸಿಎಂ ಕಿವಿಮಾತು ಹೇಳಿದರು.

Category
ಕರಾವಳಿ ತರಂಗಿಣಿ