image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗ ಏರ್‌ಪೋರ್ಟ್‌ ಡಿವಿಆರ್‌ ಅಳವಡಿಕೆಗೆ ಅನುದಾನ ಎಂದ ಮಧು ಬಂಗಾರಪ್ಪ

ಶಿವಮೊಗ್ಗ ಏರ್‌ಪೋರ್ಟ್‌ ಡಿವಿಆರ್‌ ಅಳವಡಿಕೆಗೆ ಅನುದಾನ ಎಂದ ಮಧು ಬಂಗಾರಪ್ಪ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೇವಿಗೇಶನ್‌ ಉಪಕರಣ ಡಿವಿಆರ್‌ ಅಳವಡಿಕೆಗೆ ರಾಜ್ಯ ಸರಕಾರ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದು, 6.50 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ಲಭಿಸಿದೆ ಎಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ನೈಟ್‌ ಲ್ಯಾಂಡಿಂಗ್‌ಗೆ ಅನುಕೂಲವಾಗುವ ನೇವಿಗೇಶನ್‌ ಉಪಕರಣ ತರಿಸಲಾಗಿದೆ. ಆದರೂ ರಾಜ್ಯ ಸರಕಾರ ಅಳವಡಿಕೆಗೆ ಆಸಕ್ತಿ ತೋರಿಸಿಲ್ಲ ಎಂದು ಕಳೆದ ವಾರ ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದರು. ಇದಕ್ಕೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಕಾಮಗಾರಿಗೆ ಹಣ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದ್ದು, ವಿಮಾನ ಪ್ರಯಾಣಿಕರಿಗೆ ತುಸು ನೆಮ್ಮದಿ ನೀಡಿದೆ.

Category
ಕರಾವಳಿ ತರಂಗಿಣಿ