image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಇನ್ಮುಂದೆ 'ಸಿವಿಲ್ ವ್ಯಾಜ್ಯ'ಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ : ಸರ್ಕಾರದಿಂದ ಮಾರ್ಗಸೂಚಿ

ಇನ್ಮುಂದೆ 'ಸಿವಿಲ್ ವ್ಯಾಜ್ಯ'ಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ : ಸರ್ಕಾರದಿಂದ ಮಾರ್ಗಸೂಚಿ

ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಮೊದಲಿಂದಲೂ ಪೊಲೀಸರು ಸುಖಾ ಸುಮ್ನೆ ತಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಇದ್ದೇ, ತಮ್ಮ ವ್ಯಾಪ್ತಿಯನ್ನು ಹಲವು ಸಾರಿ ಪೊಲೀಸರು ಸಿವಿಲ್‌ ವ್ಯಾಜ್ಯಗಳಲ್ಲಿ ತಲೆ ಹಾಕಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇದಲ್ಲದೇ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್‌ಗಳು ಸಿವಿಲ್ ವ್ಯಾಜ್ಯಗಳಲ್ಲಿ ಪೋಲಿಸರ ಕೆಲಸ ಮತ್ತು ಕಾರ್ಯ ವ್ಯಾಪ್ತಿಗಳ ಬಗ್ಗೆ ತಿಳಿಸುತ್ತಲೇ ಬಂದಿದ್ದು, ಯಾವುದೇ ಕಾರಣಕ್ಕೂ ಕೂಡ ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ತಲೆ ಹಾಕುವ ಹಾಗೇ ಇಲ್ಲ ಅಂತ ಖಡಕ್ ಆಗಿ ಹೇಳಿದೆ. ಆದರೆ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ಏನು ಹೇಳಿದರು ಕೂಡ ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ತಲೆ ಹಾಕುತ್ತಾರೆ ಎನ್ನಲಾಗುತ್ತಿದೆ. ಇದಲ್ಲದೇ ನ್ಯಾಯಾಲಗಳು ಕೂಡ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿದೆ. ಕೂಡ ಈಗ ಮತ್ತೆ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರು ತಮ್ಮ ಇಲಾಖೆ ಅಧೀನದ ಪೊಲೀಸರಿಗೆ ತಿಳಿ ಹೇಳುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಅದರ ವಿವರ ಈ ಕೆಳಕಂಡತಿದೆ. CRM-3/105/2018, Dated 14.11.2018. 2) ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ರಿಟ್ ಅರ್ಜಿ ಸಂ. 52846/2016, ದಿನಾಂಕ 16.06.2023)ರಲ್ಲಿ ನೀಡಿದ ತೀರ್ಪು, 3) ಲಲಿತಾ ಕುಮಾರಿ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತು ಇತರರ ಪ್ರಕರಣದಲ್ಲಿ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪು ದಿನಾಂಕ: 12.11.2013. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖ-1ರ ಸುತ್ತೋಲೆ ಅನುಸಾರ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ವಿಷಯಗಳನ್ನು ನಿರ್ವಹಿಸುವ ಕುರಿತಂತೆ ಪೊಲೀಸ್‌ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಸುತ್ತೊಲೆಯನ್ನು ಈಗಾಗಲೇ ಹೊರಡಿಸಲಾಗಿತ್ತು.

ಆದರೆ, ಕರ್ನಾಟಕ ಗೌರವಾನ್ವಿತ ಉಚ್ಛ ನ್ಯಾಯಾಯಲಯವು, ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಡಬ್ಲ್ಯೂಪಿ ಸಂಖ್ಯೆ: 52846/2016, ದಿನಾಂಕ: 16/06/2023) ಪ್ರಕರಣದಲ್ಲಿ ಕಂಡಿಕೆ ಸಂಖ್ಯೆ: 19 ರಲ್ಲಿ ಈ ಕೆಳಗಿನಂತೆ ಅಭಿಪ್ರಾಯ ಮತ್ತು ನಿರ್ದೇಶನವನ್ನು ನೀಡಿರುತ್ತದೆ.

Category
ಕರಾವಳಿ ತರಂಗಿಣಿ