ಬೆಂಗಳೂರು : ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ ) ಈಗಾಲೇ ಉದ್ಯೋಗ ಕಡಿತ ಮಾಡಿದೆ. ಇತ್ತೀಚೆಗಷ್ಟೇ 12,000 ಉದ್ಯೋಗ ಕಡಿತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಬರೋಬ್ಬರಿ 80,000 ಉದ್ಯೋಗ ಕಡಿತ ಮಾಡುತ್ತಿದೆ. ಉದ್ಯೋಗಿಗಳಿಗೆ ಈಗಾಗಲೇ ಇಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಬರೋಬ್ಬರಿ 80 ಸಾವಿರ ಉದ್ಯೋಗ ಕಡಿತಗೊಳಿಸಲು ಟಿಸಿಎಸ್ ಮುಂದಾಗಿದೆ ಎಂದು ವರದಿ ಹೇಳುತ್ತಿದೆ. ಟಿಸಿಎಸ್ ಈ ಬಾರಿ ಉದ್ಯೋಗ ಕಡಿತದ ಲಿಸ್ಟ್ ರೆಡಿ ಮಾಡಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಹಲವು ಕಾರಣಗಳಿಂದ ಟಿಸಿಎಸ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಲಿಸ್ಟ್‌ನಲ್ಲಿರುವ ಉದ್ಯೋಗಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿತ್ತು. ತಕ್ಷಣದಿಂದಲೇ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. 80,000 ಉದ್ಯೋಗ ಕಡಿತದ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಎಕ್ಸ್ ಬಳಕೆದಾರ ಸೋಹಮ್ ಸರ್ಕಾರ ಪೋಸ್ಟ್ ಮೂಲಕ ಹೇಳಿದ್ದಾರೆ. ಸೋಹಮ್ ಸರ್ಕಾರ ಆತ್ಮೀಯ ಗೆಳೆಯ ಹಾಗೂ ಸಹೋದ್ಯೋಗಿಗೆ ಈಗಾಗಲೇ ಟಿಸಿಎಸ್ ರಾಜೀನಾಮೆ ನೀಡಲು ಸೂಚಿಸಿದೆ ಎಂದಿದ್ದಾರೆ.
ಸೋಹಮ್ ಸರ್ಕಾರ ಟ್ವೀಟ್‌ಗೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಜಶನ್ ಅನ್ನೋ ಎಕ್ಸ್ ಬಳಕೆದಾರ ಇದೇ ಘಟನೆ ಹೇಳಿದ್ದಾರೆ. ತಮ್ಮ ಆಪ್ತ ಗೆಳೆಯರ ಪತ್ನಿ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವರಿಗೆ ಈ ರೀತಿ ಯಾವುದೇ ಪರಿಹಾರವಿಲ್ಲದೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಆದರೆ ಇದು 80 ಸಾವಿರ ಉದ್ಯೋಗ ಕಡಿತ ಅನ್ನೋದು ಕುರಿತು ಮಾಹಿತಿ ಇಲ್ಲ. ಆದರೆ ಉದ್ಯೋಗ ಕಡಿತ ಆರಂಭಗೊಂಡಿದೆ ಎಂದಿದ್ದಾರೆ. 20 ರಿಂದ 25 ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೂ ಯಾವುದೇ ಪರಿಹಾರ ನೀಡದೇ ರಾಜೀನಾಮೆಗೆ ಸೂಚಿಸಿದ್ದರೆ. ಹಲವರ ಉದ್ಯೋಗ ಈಗಾಗಲೇ ಕಡಿತಗೊಂಡಿದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದಾರೆ. 80 ಸಾವಿರ ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಸೂಚನೆ ನೀಡಲಾಗಿದೆ. ಈ ಪೈಕಿ ಕೆಲ ಉದ್ಯೋಗಳಿಗೆ 18 ತಿಂಗಳ ವೇತನ ನೀಡುವ ಭರವಸೆ ನೀಡಿದೆ. ಕೆಲವರಿಗೆ ಮೂರು ತಿಂಗಳು ಹಾಗೂ ಮತ್ತೆ ಕೆಲವರಿಗೆ ಯಾವುದೇ ಪರಿಹಾರವೂ ಇರುವುದಿಲ್ಲ ಎಂದು ವರದಿ ಹೇಳುತ್ತಿದೆ.