image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದ ಮಾರ್ನಮಿ ಬೈಲ್ ನಿವಾಸಿ ಮೇಲೆ ಧರ್ಮ ಕೇಳಿ ಅನ್ಯಕೋಮಿನ ಯುವಕರಿಂದ ಹಲ್ಲೆ ...!

ಶಿವಮೊಗ್ಗದ ಮಾರ್ನಮಿ ಬೈಲ್ ನಿವಾಸಿ ಮೇಲೆ ಧರ್ಮ ಕೇಳಿ ಅನ್ಯಕೋಮಿನ ಯುವಕರಿಂದ ಹಲ್ಲೆ ...!

ಶಿವಮೊಗ್ಗ : ಹಿಂದೂನಾ, ಮುಸ್ಲಿಂನಾ? ಎಂದು ಕೇಳಿ ಶಿವಮೊಗ್ಗದ ಮಾರ್ನಮಿ ಬೈಲ್ ಸ್ಥಳೀಯ ನಿವಾಸಿ ಹರೀಶ್ ಮೇಲೆ ಅನ್ಯಕೋಮಿನಾ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾತ್ರಿ ವೇಳೆ ಮನೆ ಪಕ್ಕದಲ್ಲೇ ವಾಕ್ ಮಾಡುತಿದ್ದ ಸಂದರ್ಭದಲ್ಲಿ ಬಂದ ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿ ಯುವಕರು ಬಳಿಕ ಪರಾರಿಯಾಗಿದ್ದಾರೆ. ಹಿಂದೂ ಎಂದು ದುರ್ಷ್ಕರ್ಮಿಗಳು ಹಲ್ಲೆ ನಡೆಸಲಾಗಿದೆ ಎಂದು ಹರೀಶ್ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.ಹರೀಶ್ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹರೀಶ್ ತಡ ರಾತ್ರಿ ಊಟ ಮುಗಿಸಿ ವಾಕಿಂಗ್ ಮಾಡಿದ್ದಾರೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಮೂವರು ದುಷ್ಕರ್ಮಿಗಳು ಹರೀಶ್‌ನ ತಡೆದು ನಿಲ್ಲಿಸಿ ನೀನು ಹಿಂದುನಾ? ಮುಸ್ಲಿಮಾ ಎಂದು ಎಂದು ಪ್ರಶ್ನೆ ಮಾಡಿದ್ದಾರೆ. ತಾನು ಹಿಂದೂ ಎಂದು ಹರೀಶ್ ಹೇಳುತ್ತಿದ್ದಂತೆ ಏಕಾಏಕಿ ಮೂವರು ಯುವಕರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡುವೆ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಮತ್ತೆ ಅಟ್ಟಾಡಿಸಿಕೊಂಡು ಹರೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸ್ವತಃ ಹರೀಶ್ ಹೇಳಿದ್ದಾರೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಧಾವಿಸಿದ್ದಾರೆ. ಮಾರ್ನಮಿ ಬೈಲ್, ಜೆಸಿ ನಗರ, ಆರ್‌ಎಂಎಲ್ ನಗರ ಪ್ರದೇಶಗಳಲ್ಲಿ ಗಾಂಜಾ ಸೇವನೆಯಿಂದ ಹಲ್ಲೆಗಳಾಗುತ್ತಿವೆ. ಈ ಭಾಗದಲ್ಲಿ ಬಯಗ್ರಸ್ಥ ವಾತಾವರಣವಿದೆ ಪೊಲೀಸರಿಗೆ ದೂರ ನೀಡಿದರು ಪ್ರಯೋಜನ ಇಲ್ಲ ಎಂದು ಸ್ಥಳೀಯ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಪೊಲೀಸರಿಗೆ ದೂರ ನೀಡಲು ಭಯಭೀತಗೊಂಡ ಹರೀಶ್‌ಗೆ ಶಾಸಕ ಚನ್ನಬಸಪ್ಪ ಧೈರ್ಯ ತುಂಬಿ ದೂರು ಕೊಡಿಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಚನ್ನಬಸಪ್ಪ ನೇರವಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಶಿವಮೊಗ್ಗದಲ್ಲಿ ದೂರು ನೀಡಲು ಭಯಗ್ರಸ್ತ ವಾತಾವರಣ ಇದೆ. ಅಮಾಯಕರ ಮೇಲೆ ಹಲ್ಲೆಗಳಾಗುತ್ತಿದೆ ಪೊಲೀಸರು ಏನು ಮಾಡುತ್ತಿಲ್ಲ ಎಂದು ಶಾಸಕರು ಆಕ್ರೋಶ ಹೊರಹಾಕಿದ್ದಾರೆ. ಶಾಸಕರು ಬಂದು ದೂರು ಕೊಡಿಸ ಬೇಕಾ? ನೀವೇನು ಮಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಶಾಸಕ ಚನ್ನಬಸಪ್ಪ ಕಿಡಿ ಕಾರಿದ್ದಾರೆ. ರಾತ್ರಿ ಮನೆ ಹತ್ತಿರ ವಾಕಿಂಗ್ ಮಾಡುತಿದ್ದೆ ಬಂದ ಮೂರ್ನಾಲ್ಕು ದುಷ್ಕರ್ಮಿಗಳು ಹಲ್ಲೆ ನಡೆಸಿದರು ಎಂದು ಹರೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೇಬಿ ನಲ್ಲಿದ್ದ ಹಣ ಎಲ್ಲವೂ ಹೋಗಿದೆ. ಹಲ್ಲೆ ಮಾಡಲು ಬಂದವರು ನೀನು ಹಿಂದುನಾ ಮುಸ್ಲಿಂ ಎಂದು ಕೇಳಿದರು ಅದಕ್ಕೆ ನಾನು ಹಿಂದೂ ಎಂದು ಉತ್ತರಿಸಿದೆ. ಹಿಂದೂ ಎನ್ನುತ್ತಿದ್ದಂತೆ ಹಲ್ಲೆ ಮಾಡಿದ್ದಾರೆ.ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕರ ಬಳಿ ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಶಾಸಕ ಚನ್ನಬಸಪ್ಪ ಜೊತೆಗೂಡಿ ಬಂದು ಕಂಪ್ಲೇಂಟ್ ಮಾಡಿದ್ದೇನೆ ಎಂದು ಹರೀಶ್ ಹೇಳಿದ್ದಾರೆ. ಮನೆಯಿಂದ ವಾಕ್ ಮಾಡುವಾಗ ಹತ್ತೆ ನಿಮಿಷದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಹರೀಶ್ ಪತ್ನಿ ಲಕ್ಷ್ಮಿ ಹೇಳಿದ್ದಾರೆ. ಹಲ್ಲೆ ನಡೆಯುತ್ತಿದ್ದರು ಯಾರು ಸಹಾಯಕ್ಕೆ ಬರಲಿಲ್ಲ. ನಮ್ಮ ಬಡಾವಣೆಯಲ್ಲಿ ಎಲ್ಲರೂ ಹೆದರುತ್ತಾರೆ ಎಂದು ಲಕ್ಷ್ಮಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ