image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಬಡವರ ಪರ ಹಲವು ಯೋಜನೆಗಳನ್ನು ನಾವು ತಂದರೂ ಜನ ಮೋದಿ ಮೋದಿ ಅಂತಾರೆ : ಬೇಸರ ಹೊರಹಾಕಿದ ಸಿದ್ದರಾಮಯ್ಯ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಬಡವರ ಪರ ಹಲವು ಯೋಜನೆಗಳನ್ನು ನಾವು ತಂದರೂ ಜನ ಮೋದಿ ಮೋದಿ ಅಂತಾರೆ : ಬೇಸರ ಹೊರಹಾಕಿದ ಸಿದ್ದರಾಮಯ್ಯ

ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಬಡವರ ಪರ ಹಲವು ಯೋಜನೆಗಳನ್ನು ನಾವು ತಂದರೂ ಜನ ಮೋದಿ ಮೋದಿ ಅಂತಾರೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ರೀತಿ ಬೇಸರ ಹೊರಹಾಕಿದ್ದಾರೆ. ನಮ್ಮ ಸರ್ಕಾರ ಬಡವರ ಪರ ಹಲವು ಯೋಜನೆಗಳನ್ನು ಕೈಗೊಂಡಿದೆ. ಆದರೂ ಜನ ಅದನ್ನು ಪರಿಗಣಿಸುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಜಲಜೀವನ್ ಮೆಷಿನ್ ಗೆ ಕೇಂದ್ರ ಏನೂ ಕೊಟ್ಟಿಲ್ಲ. ಕಬ್ಬು, ಮೆಕ್ಕೆಜೋಳಕ್ಕೆ ಎಂಎಸ್ ಪಿ ನಿಗಪಡಿಸಬೇಕಾಗಿರುವುದು ಕೇಂದ್ರ ಸರ್ಕಾರ. ಹಾಗಿದ್ದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರದ ಜವಾಬ್ಧಾರಿ ಏನೂ ಇಲ್ಲ ಅಂತಾರೆ. ಹೀಗೆ ಸುಳ್ಳು ಹೇಳುವ ಇವರದ್ದೇ ಒಂದು ಬುರುಡೆ ಗ್ಯಾಂಗ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರದ್ದು ಯಾವುದೇ ಜನಪರ ಯೋಜನೆಗಳಿಲ್ಲ. ಜನರಲ್ಲಿ ಬಿಜೆಪಿ ಬಗ್ಗೆಯೇ ಅವಿಶ್ವಾಸವಿದೆ. ಹೀಗಿರುವಾಗ ಅವರು ನಮ್ಮ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತಾರಂತೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ