image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಹುಮುಖ ವ್ಯವಹಾರ ಕ್ಷೇತ್ರದಲ್ಲಿ ಜೆ ಎಸ್ ಅಸೋಸಿಯೇಟ್ಸ್ ಮತ್ತೊಂದು ಹೆಜ್ಜೆ...

ಬಹುಮುಖ ವ್ಯವಹಾರ ಕ್ಷೇತ್ರದಲ್ಲಿ ಜೆ ಎಸ್ ಅಸೋಸಿಯೇಟ್ಸ್ ಮತ್ತೊಂದು ಹೆಜ್ಜೆ...

ಮೈಸೂರು: ರಿಯಲ್ ಎಸ್ಟೇಟ್, ಕಾನ್ಸ್ಟ್ರಕ್ಷನ್, ಚಾರ್ಟೆಡ್ ಅಕೌಂಟಿಂಗ್ ಹಾಗೂ ಇತರೆ ಬಹುಮುಖ ವ್ಯವಹಾರಗಳಲ್ಲಿ ತೊಡಗಿರುವ JS Associates ಸಂಸ್ಥೆಯ ಹೊಸ ಕಚೇರಿ ಮೈಸೂರಿನ ಚಾಮುಂಡಿಪುರಂ ಸರ್ಕಲ್‌ನ ಅಗ್ರಿಮಿತ್ ಕಾಂಪ್ಲೆಕ್ಸ್ ನಲ್ಲಿ  ಭವ್ಯವಾಗಿ ಉದ್ಘಾಟಿಸಲಾಯಿತು.ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯರು ಹಾಗೂ ಮಹಾರಾಷ್ಟ್ರ ಪರಿಶಿಷ್ಟ ವಿಭಾಗದ ಉಸ್ತುವಾರಿ ಆನಂದ್ ಕುಮಾರ್ ನೆರವೇರಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಆನಂದ್ ಕುಮಾರ್ JS Associates ಸಂಸ್ಥೆ ಮೈಸೂರಿನಲ್ಲಿ ಗುಣಮಟ್ಟದ ಸೇವೆ, ನಂಬಿಕೆ ಮತ್ತು ವೃತ್ತಿಪರತೆಯ ಮೂಲಕ ಉತ್ತಮ ಹೆಸರನ್ನು ಗಳಿಸಿದೆ. ಹೊಸ ಕಚೇರಿ ಆರಂಭದೊಂದಿಗೆ ಸಂಸ್ಥೆಯ ಸೇವೆಗಳು ಇನ್ನಷ್ಟು ವಿಸ್ತರಿಸಿ ಸಾರ್ವಜನಿಕರಿಗೆ ಉತ್ತಮ ಪರಿಹಾರಗಳನ್ನು ನೀಡಲಿದೆ. ಯುವ ಉದ್ಯಮಿಗಳು ಇಂಥ ಬಹುಮುಖ ವ್ಯವಹಾರಗಳ ಮೂಲಕ ಸಮಾಜಕ್ಕೆ ಉದ್ಯೋಗ ಹಾಗೂ ಅಭಿವೃದ್ಧಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮಾಲಿಕರಾದ ಜೇ. ಜಯಂತ್,“JS Associates ಇಂದು ಹೊಸ ಕಚೇರಿ ಮೂಲಕ ರಿಯಲ್ ಎಸ್ಟೇಟ್, ನಿರ್ಮಾಣ, ಚಾರ್ಟೆಡ್ ಅಕೌಂಟಿಂಗ್ ಮತ್ತು ಇತರ ಬಹುಮುಖ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ. ಸಂಸ್ಥೆಯ ಮೇಲಿನ ಜನರ ವಿಶ್ವಾಸವೇ ನಮ್ಮ ಬಲ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಗುಣಮಟ್ಟ ಹಾಗೂ ನಂಬಿಕಸ್ಥ ಸೇವೆ ನೀಡಲು ಬದ್ಧರಾಗಿದ್ದೇವೆ,”  ವಿಭಿನ್ನ ಕ್ಷೇತ್ರಗಳಲ್ಲಿ ನೀಡುತ್ತಿರುವ ಸೇವೆಯನ್ನು ಮತ್ತಷ್ಟು ವಿಸ್ತರಿಸಿ ಜನರಿಗೆ ನಂಬಿಕಸ್ಥ ಪರಿಹಾರ ನೀಡಲಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಿಕರಾದ ಸುಬೇಕ್ ಅಗರ್ ವಾಲ್, ಮಾಜಿ ಮೂಡಾ ಅಧ್ಯಕ್ಷ ಹೆಚ್. ವಿ. ರಾಜೀವ್, ಕೆ.ಆರ್. ನಗರ ಬಿಜೆಪಿ ಅಧ್ಯಕ್ಷ ರಘುರಾಜ್ ಅರಸ್, ಪ್ರಖ್ಯಾತ ಚಾರ್ಟೆಡ್ ಅಕೌಂಟೆಂಟ್ ಗುರು , ಉದ್ಯಮಿ ಹರೀಶ್ ನಾಯ್ಕ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.

Category
ಕರಾವಳಿ ತರಂಗಿಣಿ