image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಮಾನವರಹಿತ ಯುದ್ಧ ವಿಮಾನ : ವಿಶ್ವದ ವಾಯು ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ಟರ್ಕಿ

ಮಾನವರಹಿತ ಯುದ್ಧ ವಿಮಾನ : ವಿಶ್ವದ ವಾಯು ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ಟರ್ಕಿ

ಇಸ್ತಾಂಬುಲ್‌: ಟರ್ಕಿಯ ರಕ್ಷಣಾ ಪಡೆ ಇದೇ ಮೊದಲ ಬಾರಿಗೆ ಮಾನವರಹಿತ ಯುದ್ಧ ವಿಮಾನದ ಮೂಲಕ ಕ್ಷಿಪಣಿಯೊಂದನ್ನು ನಿಖರ ಗುರಿಯೊಂದಿಗೆ ಹೊಡೆದುರುಳಿಸುವ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಈ ಮೂಲಕ ವಿಶ್ವದ ವಾಯು ರಕ್ಷಣಾ ಕ್ಷೇತ್ರದಲ್ಲಿ ಟರ್ಕಿ ಇತಿಹಾಸ ನಿರ್ಮಿಸಿದೆ. ಬೇಕರ್‌ ಎಂಬ ಸಂಸ್ಥೆ ನಿರ್ಮಿಸಿರುವ ಬಯ್ರಕ್‌ಟಾರ್‌ ಕಿಜಿಲೆಲ್ಮಾ ಎಂಬ ಯುದ್ಧ ವಿಮಾನವು ಈ ಸಾಧನೆ ಮಾಡಿದ್ದು, ಮಾನವ ರಹಿತ ಯುದ್ಧವಿಮಾನವು ಕ್ಷಿಪಣಿಯೊಂದನ್ನು ಹೊಡೆದುರುಳಿಸಿದ ನಿದರ್ಶನ ವಿಶ್ವದಲ್ಲೇ ಮೊದಲು ಎನ್ನಲಾಗಿದೆ. ಅಲ್ಲದೆ ಈ ವಿಮಾನ ಶತ್ರುವಿಗೆ ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ. ಇದರಿಂದಾಗಿಯೇ ಶತ್ರುವನ್ನು ನಿಖರವಾಗಿ ಗುರುತಿಸಿ ಹೊಡೆದುರುಳಿಸಲು ಈ ವಿಮಾನ ಹೆಚ್ಚು ಸಾಮರ್ಥ್ಯ ಹೊಂದಿದೆ.

Category
ಕರಾವಳಿ ತರಂಗಿಣಿ