image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಗುಂಡಿನ ದಾಳಿ!

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಗುಂಡಿನ ದಾಳಿ!

ಸಿಡ್ನಿ : ಸಿಡ್ನಿಯ ಬೊಂಡಿ ಬೀಚ್​ನಲ್ಲಿ ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡುಗಳು ಹಾರಿವೆ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದು, ಘಟನೆಯನ್ನುಆಘಾತಕಾರಿ ಮತ್ತು ದುಃಖಕರ ಎಂದು ಕರೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯಹೂದಿ ಸಮುದಾಯದ ಹಬ್ಬದ ಆಚರಣೆಗೆ ಸಮುದಾಯ ಬಹುತೇಕರು ಸಿಡ್ನಿ ಬಳಿ ಬೊಂಡಿ ಬೀಚ್‌ನಲ್ಲಿ ಸೇರಿದ್ದರು. ಎಲರಲ್ಲಿ ಸಂಭ್ರಮದ ವಾತಾವರಣವಿತ್ತು. ಮಧ್ಯಾಹ್ನ 2.17ರ ವೇಳೆ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಶೂಟರ್ ಈ ಹಬ್ಬದ ಸ್ಥಳಕ್ಕೆ ಎಂಟ್ರಿಕೊಟ್ಟಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಗುಂಡು ಸಿಡಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಹಲವು ಅಮಾಯಕರು ಗಾಯಗೊಂಡಿದ್ದಾರೆ.

10 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹಬ್ಬಕ್ಕೆ ಆಗಮಿಸಿದ ಹಲವರು ಸಿಕ್ಕ ಸಿಕ್ಕ ವಸ್ತು, ಗೊಡೆ, ಮರ, ಕಾರುಗಳ ಬದಿಯಲ್ಲಿ ಪ್ರಾಣ ಉಳಿಸಿಕೊಳ್ಳಲು ಅಡಗಿ ಕುಳಿತಿದ್ದಾರೆ. ಹೀಗೆ ಕಾರಿನ ಬದಿಯಲ್ಲಿ ಅಡಗಿ ಕುಳಿತ ವ್ಯಕ್ತಿ ಹತ್ತಿರದಿಂದಲೇ ಶೂಟರ್ ದಾಳಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮರ ಬಳಿ ನಂತಿದ್ದ ಶೂಟರ್ ಅಮಾಯಕರ ಮೇಲೆ ಗುಂಡಿನ ದಾಳಿ ಮುಂದುವರಿಸಿದ್ದ. ಧೈರ್ಯ ಮಾಡಿಗ ಯೂಹೂದಿ ಹಿಂಬದಿಯಿಂದ ತೆರಳಿ ಶೂಟರ್ ಗನ್ ಹಾಗೂ ಕೊರಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಈ ವೇಳೆ ಜಟಾಪಟಿ ಶುರುವಾಗಿದೆ. ಸಾಹಸ ಮೆರೆದ ಯೂಹೂದಿ ಶೂಟರ್ ಕೈಯಲ್ಲಿದ್ದ ಗನ್ ಕಸಿದುಕೊಂಡಿದ್ದಾನೆ. ಗನ್ ಕಸಿದ ವ್ಯಕ್ತಿ ಬಳಿಕ ಗನ್ ಕೆಳಗಿಟ್ಟಿದ್ದಾನೆ. ಅಷ್ಟೊತ್ತಿಗೆ ಶೂಟರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಇಬ್ಬರು ಶೂಟರ್‌ಗಳ ಪೈಕಿ ಒಬ್ಬನನ್ನು ಪೊಲೀಸರು ಹತ್ಯೆ ಮಾಡಿದ್ದರೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮತ್ತೊಬ್ಬ ಶೂಟರ್‌ನ ಅರೆಸ್ಟ್ ಮಾಡಲಾಗಿದೆ. ಭಯೋತ್ಪಾದ ಕೃತ್ಯವಾಗಿರಬಹುದೇ ಅನ್ನೋ ಅನುಮಾನಗಳು ಕಾಡುತ್ತಿದೆ. ಯಹೂದಿಗಳ ಗುರಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಶೂಟರ್ ಹೆಚ್ಚು ಮಕ್ಕಳು ಹಾಗೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನ ಸೇರಿದ್ದ ಹಬ್ಬದ ವಾತಾವರಣದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಆಯಂಥೋನಿ ಆಲ್ಬನಿಸ್, ಪೊಲೀಸ್ ಸೂಚನೆಗಳನ್ನು ಪಾಲಿಸಲು ಮನವಿ ಮಾಡಿದ್ದಾರೆ. ಈ ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ಆಲ್ಬನಿಸ್, ದಾಳಿ ಮಾಡಿದ ಇಬ್ಬರು, ಇದರ ಹಿಂದಿನ ಶಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ