image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬೊಂಡಿ ಬೀಚ್ ಟೆರರ್ ದಾಳಿ ಹಿಂದೆ ಪಾಕ್ ಕೈವಾಡ?

ಬೊಂಡಿ ಬೀಚ್ ಟೆರರ್ ದಾಳಿ ಹಿಂದೆ ಪಾಕ್ ಕೈವಾಡ?

ಸಿಡ್ನಿ : ಸಿಡ್ನಿಯ ಬೊಂಡಿ ಬೀಚ್​ ಬಳಿ ಯಹೂದಿಗಳನ್ನ ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಯಹೂದಿಗಳು ತಮ್ಮ ಸಾಂಪ್ರದಾಯಿಕ ಹನುಕ್ಕಾ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದ ವೇಳೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದು ನೆತ್ತರಕೋಡಿ ಹರಿಸಿದ್ದಾರೆ. ಮಹಿಳೆಯರು, ಮಕ್ಕಳು ಅಂತಲೂ ನೋಡದೇ ಫೈರಿಂಗ್​ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಓರ್ವನನ್ನ ನವೀದ್​ ಅಕ್ರಮ್​ ಪಾಕಿಸ್ತಾನದ ಮೂಲದವನು ಎಂದು ತಿಳಿದು ಬಂದಿದೆ. ಶಂಕಿತ ನವೀದ್​ ಅಕ್ರಮ್​​ ನ್ಯೂ ಸೌತ್ ವೇಲ್ಸ್‌ನ ಹೆಕೆನ್‌ಬರ್ಗ್‌ನ ಅಲ್-ಮುರಾದ್ ಸಂಸ್ಥೆಯಲ್ಲಿ ಅರೇಬಿಕ್ ಮತ್ತು ಕುರಾನ್ ಕಲಿಸುವ ವಿದ್ಯಾರ್ಥಿ ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ. ಅಲ್-ಮುರಾದ್ ಸಂಸ್ಥೆಯು ನ್ಯೂ ಸೌತ್ ವೇಲ್ಸ್‌ನಲ್ಲಿ ನೋಂದಾಯಿತ ವ್ಯಾಪಾರ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು. ದಾಖಲೆಗಳ ಪ್ರಕಾರ ಆಡಮ್ ಇಸ್ಮಾಯಿಲ್ ಎಂಬಾತ ಈ ಸಂಸ್ಥೆಯ ನೋಂದಾಯಿತ ಮಾಲೀಕ ಎಂದು ತಿಳದು ಬಂದಿದೆ. ಸದ್ಯ ಈ ಅಲ್-ಮುರಾದ್ ಸಂಸ್ಥೆ ಭಯೋತ್ಪಾದಕ ದಾಳಿಗೆ ಸಂಬಂಧವಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ವರದಿಯ ಪ್ರಕಾರ, ನವೀದ್​​ ಅಕ್ರಮ್​​ನ ಫೇಸ್​ಬುಕ್​​ನಲ್ಲಿ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಇಸ್ಲಾಮಾಬಾದ್‌ನ ಹ್ಯಾಮ್‌ದರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು ಎಂದು ತಿಳಿದು ಬಂದಿದೆ. ಅಕ್ರಮ್​ ಅಲ್ ಮುರಾದ್ ಇನ್‌ಸ್ಟಿಟ್ಯೂಟ್‌ನಲ್ಲಿಯೂ ಅಧ್ಯಯನ ಮಾಡಿದ್ದರು, ಅಲ್ಲಿ ಅವರನ್ನು ಮಾದರಿ ವಿದ್ಯಾರ್ಥಿ ಎಂದು ಬಣ್ಣಿಸಲಾಗಿತ್ತು. ಆದ್ರೆ ಇತ್ತೀಚಿಗಷ್ಟೇ ನವೀದ್​ ಅಕ್ರಮ್​ ಕೆಲಸ ಬಿಟ್ಟಿದ್ದ ಎಂದು ಉಲ್ಲೇಖಿಸಲಾಗಿದೆ. ಆಸ್ಟ್ರೇಲಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಆರ್ಗನೈಸೇಶನ್ (ASIO) ಮುಖ್ಯಸ್ಥ ಮೈಕ್ ಬರ್ಗೆಸ್, ದಾಳಿಕೋರರ ಗುರುತುಗಳನ್ನು ಮತ್ತು ಸಮುದಾಯದಲ್ಲಿ "ಇದೇ ರೀತಿಯ ಉದ್ದೇಶ ಹೊಂದಿರುವ" ಬೇರೆ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸುತ್ತಿರುವುದಾಗಿ ಹೇಳಿದರು. ಇನ್ನು ದಾಳಿಯ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಆರ್ಗನೈಸೇಶನ್ (ASIO) ಮುಖ್ಯಸ್ಥ ಮೈಕ್ ಬರ್ಗೆಸ್, ಇದೇ ರೀತಿಯ ಉದ್ದೇಶ ಹೊಂದಿರುವ ಬೇರೆ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ. ತನಿಖೆಯನ್ನ ತೀವ್ರಗೊಳಿಸಿರುವ ಸಿಡ್ನಿ ಪೊಲೀಸರು, ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರಲ್ಲಿ ಒಬ್ಬನಿಗೆ ಸಂಬಂಧಿಸಿದ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ದಾಳಿಯನ್ನು ತೀವ್ರವಾಗಿ ಖಂಡಿಸಿದರು, ಇದನ್ನು ಯಹೂದಿ ವಿರೋಧಿ ಮತ್ತು ಭಯೋತ್ಪಾದನೆಯ ಕೃತ್ಯ ಎಂದು ಕರೆದಿದ್ದಾರೆ.

Category
ಕರಾವಳಿ ತರಂಗಿಣಿ