image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಭಾರತಕ್ಕೆ ತಲೆನೋವಾಗಲಿದೆಯೇ ಚೀನಾ ನಿರ್ಮಿತ ಬಾಂಗ್ಲಾದೇಶದ ವಾಯುಪಡೆಯ 'ಲಾಲ್ಮೋನಿರಹತ್' ವಾಯುನೆಲೆ..?

ಭಾರತಕ್ಕೆ ತಲೆನೋವಾಗಲಿದೆಯೇ ಚೀನಾ ನಿರ್ಮಿತ ಬಾಂಗ್ಲಾದೇಶದ ವಾಯುಪಡೆಯ 'ಲಾಲ್ಮೋನಿರಹತ್' ವಾಯುನೆಲೆ..?

ನವದೆಹಲಿ - ಬಾಂಗ್ಲಾದೇಶದ ವಾಯುಪಡೆಯ 'ಲಾಲ್ಮೋನಿರಹತ್' ವಾಯುನೆಲೆಯನ್ನು ಚೀನಾ ನಿರ್ಮಿಸುತ್ತಿದೆ. ಇದರೊಂದಿಗೆ, ಬಾಂಗ್ಲಾದೇಶದ 'ಪೇಕುವಾ'ದಲ್ಲಿ 8 ಜಲಾಂತರ್ಗಾಮಿಗಳಿಗಾಗಿ ನೆಲೆಯನ್ನು ಸಹ ಚೀನಾ ನಿರ್ಮಿಸುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸ್ಥಾಯೀ ಸಮಿತಿಯು ಸಲ್ಲಿಸಿರುವ ವರದಿಯಿಂದ ಈ ಮಾಹಿತಿ ಹೊರಬಂದಿದೆ. ಬಾಂಗ್ಲಾದೇಶದ ಲಾಲ್ಮೋನಿರಹತ್ ವಾಯುನೆಲೆಯು ಭಾರತದ ಉತ್ತರ ಗಡಿಯಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಈ ವಾಯುನೆಲೆಯ ವ್ಯಾಪ್ತಿಯಲ್ಲಿ ಭಾರತದ 'ಸಿಲಿಗುರಿ ಕಾರಿಡಾರ್' ಬರುತ್ತದೆ. ಪ. ಬಂಗಾಳದಲ್ಲಿರುವ ಮತ್ತು ನೇಪಾಳ-ಬಾಂಗ್ಲಾದೇಶ ಗಡಿಗಳಿಗೆ ಹೊಂದಿಕೊಂಡಿರುವ ಸುಮಾರು 22 ಕಿಲೋಮೀಟರ್ ಉದ್ದದ ಅತ್ಯಂತ ಕಿರಿದಾದ ಭೂಭಾಗವೇ 'ಸಿಲಿಗುರಿ ಕಾರಿಡಾರ್'. ಈಶಾನ್ಯದ 7 ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಭೂಮಾರ್ಗ ಇದಾಗಿದೆ.

ಆದ್ದರಿಂದ, ಇದು ಭಾರತದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಬಾಂಗ್ಲಾದೇಶದ ನೌಕಾಪಡೆಯು ಪ್ರಸ್ತುತ ಎರಡು ಜಲಾಂತರ್ಗಾಮಿಗಳನ್ನು ಹೊಂದಿದೆ. ಬಾಂಗ್ಲಾದೇಶವು ಇದೇ ವರ್ಷ ಮಾರ್ಚ್‌ನಲ್ಲಿ ಚೀನಾದೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ, ಬಾಂಗ್ಲಾದೇಶದ 'ಮೊಂಗ್ಲಾ' ಬಂದರಿನ ವಿಸ್ತರಣೆಯನ್ನು ಚೀನಾ ಮಾಡಿಕೊಡಲಿದೆ. ಬಾಂಗ್ಲಾದೇಶದಲ್ಲಿ ಚೀನಾದಂತಹ ದೇಶವು ನೆಲೆಯೂರುವುದು ಭಾರತದ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸ್ಥಾಯೀ ಸಮಿತಿ ತಿಳಿಸಿದೆ.

Category
ಕರಾವಳಿ ತರಂಗಿಣಿ